ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭೂ ಕಬಳಿಕೆ: ಕ್ರಮಕ್ಕೆ ಆಗ್ರಹ

Rashmi Kasaragodu
Updated On : 9 Jul 2014, 2:06 am

ಕೋಲಾರ: ಮುಳಬಾಗಿಲು ತಾಲೂಕಿನ ಆವಣಿ ಹೋಬಳಿಗೆ ಸೇರಿದ ರಾಷ್ಟ್ರೀಯ ಹೆದ್ದಾರಿ 78ರ ಕಾಂತರಾಜ ವೃತ್ತದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜಮ್ಮನಹಳ್ಳಿ ಗ್ರಾಮದ ಸ.ನಂ 103ರಲ್ಲಿ ಬೆಲೆ ಬಾಳುವ ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ಕಬಳಿಕೆ ಮಾಡಿರುವ ಭೂ ಮಾಫಿಯಾ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿ ಕಡತಗಳನ್ನು ನಾಪತ್ತೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಂಬರಿ ನಾಗರಾಜ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಅವರು, ಜಮ್ಮನಹಳ್ಳಿ ಗ್ರಾಮಕ್ಕೆ ಸೇರಿದ ಸ.ನಂ 103ರ ಸರ್ಕಾರಿ ಗೋಮಾಳದಲ್ಲಿ ಒಟ್ಟು 217 ಎಕರೆಗಳ ಪೈಕಿ ಒಟ್ಟು 36 ಎಕರೆ ಭೂಮಿಯನ್ನು ದೇವರಾಯಸಮುದ್ರಕ್ಕೆ ಸೇರಿದ ಜಿ.ಎನ್. ವೆಂಕಟೇಶ್ ಅಯ್ಯರ್ ಮತ್ತು ಎಂ.ಆರ್. ವೆಂಕಟಕೇಶ್ ಅಯ್ಯರ್ ಎಂಬುವರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಪಹಣಿ ಮಾಡಿಕೊಟ್ಟಿದ್ದಾರೆಂದು ದೂರಿದ್ದಾರೆ. ಇದೇ ರೀತಿ ವೇಮಗಲ್ ಜಿ.ಮುರಳೀಧರ ಕೋಲಾರ ನಗರಸಭೆ ಸೇರಿದ ಸ.ನಂ.32ರಲ್ಲಿ 0.23 ಗುಂಟೆ ಜಮೀನಲ್ಲ್ಲ ಚರ್ಮ ಕೈಗಾರಿಕೆಗಾಗಿ ಕೋಲಾರ ತಾಲೂಕು ಕಚೇರಿಯಿಂದ ಮೀಸಲಿರಿಸಿದ್ದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್ ಕಾರ್ಖಾನೆ ಮತ್ತು ಶೇಂಗಾ ಬೀಜದ ಕಾರ್ಖಾನೆ ನಿರ್ಮಿಸಿಕೊಂಡರುವ ಮಾಲೀಕರ ವಿರುದ್ಧ ಹಾಗೂ ಸ.ನಂ.33ರಲ್ಲಿ 1.07 ಗುಂಟೆ ಜಮೀನನ್ನು ಸಂಗೊಂಡಹಳ್ಳಿ ಗ್ರಾಮದ ದಲಿತರ ಸ್ಮಶಾನಕ್ಕಾಗಿ ಮೀಸಲಿರಿಸಲು ಸರ್ವೆಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವ ಜಮೀನಿನಲ್ಲಿ 0.30 ಗುಂಟೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement