ಸಾಹಿತ್ಯ ಸಮ್ಮೇಳನ 16ರಿಂದ
ಮುಳಬಾಗಲು: 4.70 ಲಕ್ಷ ವೆಚ್ಚದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮಿನಿವಿಧಾನಸೌಧದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಏಕೇಶಬಾಬು ವಹಿಸಿದ್ದರು. ಕಸಾಪ ವತಿಯಿಂದ 90 ಸಾವಿರ ಅನುದಾನ ನೀಡಲಾಗುವುದು. ತಾಲೂಕಿನ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಯೋಜನೆ ರೂಪಿಸಲಾಯಿತು. ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು. ಸಮ್ಮೇಳನ ಅಧ್ಯಕ್ಷರ ಪಲ್ಲಕ್ಕಿ ಮೆರವಣೆಗೆ ಬದಲು ಭುವನೇಶ್ವರಿದೇವಿ ಮೆರವಣೆಗೆ ಮಾಡಲು ಕಸಾಪ ಘಟಕದ ತೀರ್ಮಾನಕ್ಕೆ ಬಿಡಲಾಯಿತು. ತಾಪಂ ಇಒ ಅರುಣಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಜಿಪಂ ಇಒ ಗಂಗಾಧರಯ್ಯ, ಪಶುಪಾಲನೆ ಸಹಾಯಕ ನಿರ್ದೇಶಕ ಡಾ. ರಮಾನಂದ್, ತಾಲೂಕು ಆರೋಗ್ಯಾಧಿಕಾರಿ ಡಾ. ನಾರಾಯಣಸ್ವಾಮಿ, ಕೃಷಿ ಸಹಾಯಕ ನಿರ್ದೇಶಕ ಬಿ.ಸಿ. ದೇವೇಗೌಡ ಇದ್ದರು.ತಾಲೂಕು ಕಸಾಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಆರ್. ಸಂಧ್ಯಾರೆಡ್ಡಿ ಅವರು ಬೆಂಗಳೂರು ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾರಣ ಅವರು ಮುಳಬಾಗಲು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ನಿರಾಕರಿಸಿದ್ದಾರೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಇ. ಶ್ರೀನಿವಾಸಗೌಡ ನೀಡಿದ ಹೇಳಿಕೆಗೆ ತಹಸೀಲ್ದಾರ್ ಕೆ. ಏಕೇಶಬಾಬು ಸಂಧ್ಯಾರೆಡ್ಡಿಯವರಿಂದ ಲಿಖಿತ ಮಾಹಿತಿ ನೀಡಲು ಸೂಚಿಸಿದರು