ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಚ್ಚಿರುವ ಸರ್ಕಾರಿ ಶಾಲೆ ತೆರೆಯಲು ಆಗ್ರಹ

Rashmi Kasaragodu
Updated On : 11 Jul 2014, 1:32 am

ಮಾಲೂರು: ಕಳೆದ ಮೂರು ವರ್ಷದಿಂದ ಮುಚ್ಚಿರುವ ಸರ್ಕಾರಿ ಶಾಲೆ ಕಾಲೋನಿಯ ಮಕ್ಕಳ ಹಿತದೃಷ್ಟಿಯಿಂದ ಪುನರಾರಂಭಿಸುವಂತೆ ಅಗ್ರಹಿಸಿ ತಾಲೂಕಿನ ಟೇಕಲ್ ಹೋಬಳಿಯ ಎ.ಜಿ.ಕಾಲೋನಿಯ ಕಾಲೇಜು ವಿದ್ಯಾರ್ಥಿಗಳು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಿಇಒಗೆ ಮನವಿ ಸಲ್ಲಿಸಿದರು.
ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಶರತ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ ತಾಲೂಕಿನ ಟೇಕಲ್ ಹೋಬಳಿಯ ಎ.ಜಿ. ಕಾಲೋನಿಯಲ್ಲಿ ಕಾಲೋನಿ ಅಸ್ತಿತ್ವಕ್ಕೆ ಬಂದ ಕಾಲದಿಂದ ಸರ್ಕಾರಿ ಶಾಲೆ ಇತ್ತು. ಕಳೆದ ಮೂರು ವರ್ಷಗಳ ಹಿಂದೆ ಮಕ್ಕಳ ಹಾಜರಾತಿ ಕೊರತೆಯಿಂದ ಮುಚ್ಚಲಾಗಿದೆ.
ಆದರೆ ಈಗ ಕಾಲೋನಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಪಕ್ಕದ ತೊರಳ್ಳಿಗೆ ಹೋಗುತ್ತಿದ್ದಾರೆ. ಬಡವರು ಹೆಚ್ಚಾಗಿರುವ ಈ ಕಾಲೋನಿಯಲ್ಲಿ ಪಕ್ಕದ ಹಳ್ಳಿಗೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ಕಳುಹಿಸಲು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮದ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಈ ಸರ್ಕಾರಿ ಶಾಲೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರಾಶಿಕ್ಷಣಾಧಿಕಾರಿ ಸುಬ್ರಮಣ್ಯ,  ನಾಳೆಯೇ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿ ಅಲ್ಲಿನ ವಾಸ್ತವತೆಯನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಶಾಲೆ ಪುನರಾರಂಭಿಸುವ ಬಗ್ಗೆ ವರದಿ ಸಲ್ಲಿಸಲಾಗುವುದೆಂದರು. ಆನಂದ್, ಮಂಜುನಾಥ್, ನವೀನ್ ಕುಮಾರ್, ಮುನಿರಾಜು, ಶಶಿ ಕುಮಾರ್, ಚಂದ್ರ, ವೆಂಕಟೇಶಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement