ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಿಯಾಯಿತಿ ದರದಲ್ಲಿ ರಸಮೇವು ಮಾರಾಟ

Rashmi Kasaragodu
Updated On : 11 Jul 2014, 1:34 am

ಬಾಗೇಪಲ್ಲಿ: ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ರಸ ಮೇವನ್ನು ಆರ್ .ಕೆ.ವಿ.ವೈ ಯೋಜನೆಯಡಿಯಲ್ಲಿ ತಾಲ್ಲೂಕಿನ ಚಾಕವೇಲು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ರೈತರಿಗೆ ವಿತರಣೆ ಮಾಡಲಾಯಿತು.
ತಾಲೂಕಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಮಳೆಯಿಲ್ಲದೆ ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ಮೇವು ಸಿಗುತ್ತಿಲ್ಲ. ಇದರಿಂದ  ಬಹುತೇಕ ರೈತರು ತಮ್ಮ ಜಾನುವಾರುಗಳನ್ನು ಬಲವಂತವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಸುಲಭವಾಗಿ ಮೇವನ್ನು ಒದಗಿಸುವ ನಿಟ್ಟಿನಲ್ಲಿ ಆರ್‌ಕೆವಿವೈ ಯೋಜನೆಯಡಿಯಲ್ಲಿ ಸುಮಾರು ರು. 40 ಸಾವಿರ ವೆಚ್ಚದಲ್ಲಿ 10 ಟನ್ ರಸಮೇವನ್ನು ಉತ್ಪಾದಿಸಿದೆ.
 ಚಾಕವೇಲು ಹಾಲು ಉತ್ಪಾದಕರ ಸಹಕಾರ ಸಂಘವು ಸಂಘದ ಪದಾಧಿಕಾರಿಗಳ ಸಹಕಾರದೊಂದಿಗೆ ರೈತರಿಗೆ ಪ್ರತಿ ಕೆಜಿಗೆ ರು. 3ರಂತೆ ರಿಯಾಯಿತಿ ದರದಲ್ಲಿ ಮೇವನ್ನು ವಿತರಿಸುತ್ತಿರುವುದಾಗಿ ಚಾಕವೇಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ವೆಂಕಟರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಾರೆಡ್ಡಿ, ಗ್ರಾಮದ ಮುಖಂಡರಾದ ಸುಬ್ಬಿರೆಡ್ಡಿ, ಶಂಕರರೆಡ್ಡಿ,  ರವಿ, ಶ್ರೀಧರ್, ನಾರಾಯಣ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement