ಸಾಯಿ ಪಲ್ಲಕ್ಕಿ ಉತ್ಸವ ನಾಳೆ
ಮಾಲೂರು: ಗುರುಪೂರ್ಣಿಮೆ ಅಂಗವಾಗಿ ಸ್ಥಳೀಯ ಶಿರಡಿಸಾಯಿ ಸೇವಾ ಟ್ರಸ್ಟ್ ಜು.12ರಂದು ಪಟ್ಟಣದಲ್ಲಿ ಸಾಯಿನಾಥರ ಪಲ್ಲಕ್ಕಿ ಉತ್ಸವ ಹಮ್ಮಿಕೊಂಡಿದೆ. ಪಟ್ಟಣದ ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ಶನಿನಾರ ಬೆಳಗ್ಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ನಂತರ ಭಕ್ತಾಧಿಗಳಿಂದ ವಿಶೇಷ ಸಾಯಿ ಭಜನೆ ಹಾಗೂ ಮಧ್ಯಾಹ್ನ 12ಕ್ಕೆ ಶಿರಡಿ ಪಂಚಾರತಿ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ, ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಯಿನಾಥರ ಅದ್ಧೂರಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಭಾನುವಾರ ಬೆಳಗೆ 8ರಿಂದ ಸಂಜೆ 6ರವರೆಗೆ ಶಿರಡಿಯಿಂದ ಬರುವ ಶಿರಡಿ ಸಾಯಿಬಾಬಾ ಪಾದುಕೆಗಳ ದರ್ಶನವನ್ನು ಶಂಕರನಾರಾಯಣಸ್ವಾಮಿ ದೇವಾಲಯದ ಅವರಣದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.