ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

26 ಅನಧಿಕೃತ ಶಾಲೆ ಬಂದ್: ಹೈಕೋರ್ಟ್ಗೆ ಪ್ರಮಾಣಪತ್ರ

Rashmi Kasaragodu
Updated On : 12 Jul 2014, 1:09 am

ಬೆಂಗಳೂರು: ಅನಧಿಕೃತವಾಗಿ ಬೆಂಗಳೂರಿನ ಸುತ್ತಮುತ್ತ ಒಟ್ಟು 56 ಶಾಲೆಗಳಿದ್ದು 26 ಶಾಲೆಗಳನ್ನು ಬಂದ್ ಮಾಡಿಸಿರುವುದಾಗಿ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದರು.
ಕೋಲಾರದಲ್ಲಿ ಅನಧಿಕೃತನಾಗಿ ಬಾಲ್ಡ್ವಿನ್ ಶಾಲೆ ಆರಂಭಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಬೋಪಣ್ಣ ಪೀಠ, ಅನಧಿಕೃತವಾಗಿ ಶಾಲೆ ನಡೆಸುತ್ತಿರುವರ ಪ್ರಮಾಣಪತ್ರ ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿತ್ತು.
  ಪ್ರಮಾಣ ಪತ್ರ ಸಲ್ಲಿಸಿದ ಇಲಾಖೆ ಇನ್ನುಳಿದ 30 ಶಾಲೆಗಳ ವಿರುದ್ಧ ಶೀಘ್ರ ಕ್ರಮ ತೆಗೆದುಕೊಳ್ಳಲಿದ್ದು ಮುಂದಿನ ದಿನದಲ್ಲಿ ಈ ರೀತಿ ಅನಾಹುತ ಆಗದಂತೆ ಎಚ್ಚರವಹಿಸುವುದಾಗಿ ಪೀಠಕ್ಕೆ ತಿಳಿಸಿತು.
 ಬಾಲ್ಡ್ವಿನ್ ಶಾಲೆಗೆ ಸೇರಿದ 277 ಮಕ್ಕಳನ್ನು ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ 3ರ ಅನ್ವಯ ಹತ್ತಿರದಲ್ಲಿರುವ ಶಾಲೆಗಳಿಗೆ ವರ್ಗಾಯಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಬಾಲ್ಡ್ವಿನ್ ಶಾಲೆಯನ್ನು ಬಂದ್ ಮಾಡುವಂತೆ ಆದೇಶ ನೀಡಿ ಏಕಸದಸ್ಯ ಪೀಠ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement