ಜನಸಂಖ್ಯೆ ಹೆಚ್ಚಳದಿಂದ ಅನಾಹುತ
ಬಂಗಾರಪೇಟೆ: ಜನಸಂಖ್ಯೆ ಹೆಚ್ಚುತ್ತಿದ್ದಂತೆ ಅನೇಕ ವೈಪರಿತ್ಯಗಳು ಉಂಟಾಗುತ್ತಿವೆ. ಜನಸಂಖ್ಯಾ ಸ್ಫೋಟ ತಡೆಯದಿದ್ದರೆ ಮುಂದೆ ಅನಾಹುತಗಳಾಗುವ ಸಂಭವ ಇದೆ ಎಂದು ಬಂಗಾರಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಕಮಲಾಕರ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಭಾಗವಹಿಸಿ, ವಿಶ್ವ ಜನಂಖ್ಯೆಯಲ್ಲಿ ಭಾರತದಲ್ಲಿ ಹೆಚ್ಚುತ್ತಿದೆ. ಪರಿಣಾಮ ಬೆಲೆಗಳೂ ಗಗನಕ್ಕೇರುತ್ತಿವೆ. ಸಾಮಾನ್ಯ ಜನ ಬದುಕಲು ಕಷ್ಟವಾಗುತ್ತಿದೆ ಎಂದು ಹೇಳಿದರು. ವಿಶ್ವ ರಕ್ತದಾನ ಶಿಬಿರ ಮತ್ತು ಡೆಂಘಿ ವಿರೋಧಿ ಮಾಸಾಚರಣೆಯೂ ಇಂದೇ ಇರುವುದಾಗಿ ತಿಳಿಸಿ, ಆ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಪುರಸಭೆ ಅಧ್ಯಕ್ಷೆ ಗಂಗಮ್ಮ, ತಾಪಂ ಅಧ್ಯಕ್ಷೆ ವೆಂಕಟರತ್ನಮ್ಮ, ಉಪಾಧ್ಯಕ್ಷೆ ಶಾಂತ ಕುಮಾರಿ, ಸಿಡಿಪಿಒ ಸಿ.ವಿ. ರಾಮನ್, ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್, ಎ.ಎಸ್.ಐ ಗೋವಿಂದರಾಜು ಮೊದಲಾವರಿದ್ದರು.