ಪ್ರಕೃತಿಗೆ ವಿರುದ್ಧ ನಡೆಯಬೇಡಿ
ಕೋಲಾರ/ಶ್ರೀನಿವಾಸಪುರ: ಮಾನವನ ದುರಾಸೆ ಮತ್ತು ಅಲಂಕಾರಿಕ ವಸ್ತುಗಳ ವ್ಯಾಮೋಹದಿಂದ ಪಕೃತಿ ವಿರುದ್ಧವಾಗಿ ನಡೆದುಕೊಂಡಿರುವ ಪರಿಣಾಮ ಇಂದು ಸಕಾಲಕ್ಕೆ ಮಳೆಯಾಗದೆ ಬರಗಾಲ ಎದುರಿಸಬೇಕಾಗಿದೆ ಎಂದು ಅಪರ ಸಿವಿಲ್ನ್ಯಾಯಾದೀಶ ಬಿ. ಮೋಹನ್ ಬಾಬು ವಿಷಾದ ವ್ಯಕ್ತಪಡಿಸಿದರು. ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ಅರವಿಂದ್, ಮಾಜಿ ಅಧ್ಯಕ್ಷ ವೆಂಕಟೇಶ್, ವಲಯ ಅರಣ್ಯ ಅಧಿಕಾರಿ ಅಶ್ಪಥಪ್ಪ, ಹಿರಿಯ ವಕೀಲ ಕೆ. ಶಿವಪ್ಪ, ಅರ್ಜುನ್, ವೆಂಕಟೇಶ್ ಬಾಬು ಇದ್ದರು.