ಸರ್ಕಾರಿ ಕಾಲೇಜಿನಲ್ಲಿ ಹೊಸ ಕೋರ್ಸ್ ಶುರು
ಮಾಲೂರು: ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಮತ್ತು ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ನೂತನ ಕೋರ್ಸ್ಗಳನ್ನು 2014-15ನೇ ಸಾಲಿನಿಂದ ಪ್ರಾರಂಭಿಸಲಾಗುತ್ತಿದೆ. ಮೂರು ವರ್ಷಗಳ ಕೋರ್ಸ್ ಬಿಎಸ್ಡಬ್ಲ್ಯೂ (60 ವಿದ್ಯಾರ್ಥಿಗಳಿಗೆ ಅವಕಾಶ), ನೂರು ವಿದ್ಯಾರ್ಥಿಗಳಿಗೆ ಅವಕಾಶವುಳ್ಳ ಇಂಗ್ಲಿಷ್ ಮಾಧ್ಯಮ(ಎಚ್ಇಪಿ) ಬಿಎ ಕೋರ್ಸ್ ಹಾಗೂ ಎಚ್ಪಿಎಸ್ನ (60 ವಿದ್ಯಾರ್ಥಿಗಳು) ಬಿಎ ಕೋರ್ಸ್ಗಳನ್ನು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ. ಆಸ್ತಕ ವಿದ್ಯಾರ್ಥಿಗಳು ಕಾಲೇಜಿಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಚಂದ್ರಶೇಖರ್ ನಂಗಲಿ ತಿಳಿಸಿದ್ದಾರೆ