ಸಾಧನೆಗೆ ನಂಬಿಕೆ ಅಗತ್ಯ
ಗೌರಿಬಿದನೂರು: ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದಾಗ ಏನಾದರೂ ಸಾಧಿಸಲು ಸಾಧ್ಯ ಎಂದು ನಿವೃತ್ತ ತಾಲೂಕು ವೈದ್ಯಾಧಿಕಾರಿ ಹಾಗೂ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಎಂ.ಎನ್. ಶಶಿಧರ್ ತಿಳಿಸಿದರು. ಪಟ್ಟಣದ ವಿನಾಯಕ ಐಟಿಐ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಐಟಿ ಕ್ಷೇತ್ರ ಹೆಚ್ಚಿರುವುದರಿಂದ ಶಿಕ್ಷಣದಲ್ಲಿ ಸ್ಪರ್ಧೆಯೂ ಇದೆ. ಆದರೆ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿದರೆ ಫಲ ಸಿಗುತ್ತದೆ ಎಂದರು. ಉಪನ್ಯಾಸಕ ಆದಿಶೇಷರಾವ್ ಮಾತನಾಡಿ, ಗುರುಗಳಿಗೆ ಗೌರವ ನೀಡುವ ಮೂಲಕ ಆದರ್ಶ ಜೀವನ ನಡೆಸಬೇಕು ಎಂದರು. ಪ್ರೊ.ಕೆ. ರಾಮಾಂಜನೇಯಲು, ಪತ್ರಕರ್ತ ವಿ.ಡಿ. ಗಣೇಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಮುರಳಿಮೋಹನ್ ಮಾತನಾಡಿದರು. ಶಿಕ್ಷಕರಾದ ರಾಮಕೃಷ್ಣಾರೆಡ್ಡಿ, ಪತ್ರಕರ್ತ ಸಂತೋಷ್ ರಾವ್, ಸಾಹಿತಿ ಕಿರಣ್ಕುಮಾರ್, ಚಿಕೋಗಾರ, ರವಿಕುಮಾರ್, ಸದಾನಂದರೆಡ್ಡಿ, ಮಂಜುನಾಥ್ ಇದ್ದರು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.