ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ: ನಗರಸಭೆ ಅಧ್ಯಕ್ಷ ಮುಬಾರಕ್ ಅಭಿಪ್ರಾಯ

Rashmi Kasaragodu
Updated On : 12 Jul 2014, 1:08 am

ಕೋಲಾರ: ನಗರದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನಗರಸಭೆ ಅಧ್ಯಕ್ಷ ಮುಬಾರಕ್ ತಿಳಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ, ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಮತ್ತು ಡೆಂಘೀ ವಿರೋಧಿ ಮಾಸಾಚರಣೆ ಉದ್ಟಾಟಿಸಿ ಮಾತನಾಡಿದರು. ನಗರದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಕಸ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ. ನಗರಸಭೆಯಿಂದ ಹಮ್ಮಿಕೊಂಡಿರುವ ಕ್ಲೀನ್ಸಿಟಿ ಅಭಿಯಾನಕ್ಕೆ ಜನತೆ ಸಹಕಾರ ನೀಡಿದ್ದರೆ ಮುಂದಿನ ದಿನಗಳಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು. ನಗರದ ಜನಸಂಖ್ಯೆ ಈಗ 1.58 ಲಕ್ಷ ದಾಟಿದೆ. ಪ್ರತಿಯೊಬ್ಬರು ದಿನಕ್ಕೆ 200 ರಿಂದ 250 ಗ್ರಾಂ ಕಸ ಹಾಕುತ್ತಿದ್ದಾರೆ. ಆದರೆ ನಗರಸಭೆಯಲ್ಲಿ 130 ಮಂದಿ ಕೆಲಸ ನಿರ್ವಹಿಸುತ್ತಿರುವಾಗ ಸ್ವಚ್ಛತೆ  ಕಾಪಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಅತಿ ಹೆಚ್ಚು ರಕ್ತ ದಾನ ಮಾಡಿದ ಮಧು, ಪ್ರಶಾಂತ್ ಮತ್ತು ಮಾಸಾಚರಣೆ ಸಂಬಂಧ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸೂರ್ಪಿ ಪರ್ವಿನ್, ಸಯಿರಾ ಪರೀನ್ ಮತ್ತು ವಿನುಶ್ರೀ ಅವರಿಗೆ ಪಾರಿತೋಷಕಗಳನ್ನು ನೀಡಲಾಯಿತು. ನಗರಸಭೆ ಉಪಾಧ್ಯಕ್ಷೆ ಸಾಕಮ್ಮ, ಸದಸ್ಯ ವೆಂಕಟೇಶ್, ಎಸ್.ಜಿ. ನಾರಾಯಣಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ಲತಾ ಪ್ರಮೀಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement