10 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ
ಗೌರಿಬಿದನೂರು: ಅಪರಿಚಿತ ನಾಲ್ಕು ವ್ಯಕ್ತಿಗಳು ಒಂಟಿ ಮನೆಗೆ ನುಗ್ಗಿ ಸುಮಾರು 10 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಹಣ ದರೋಡೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕು ನಗರಗೆರೆ ಹೋಬಳಿ ಗುಂಡ್ಲುಕೊತ್ತೂರಿಗೆ ಹೊಂದಿಕೊಂಡಂತೆ ಇರುವ ಚಿನ್ನಪ್ಪರೆಡ್ಡಿ ಹಳ್ಳಿಯ ಪದ್ಮಾವತಮ್ಮ(50) ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪದ್ಮಾವತಮ್ಮ ಅವರ ಮನೆ ಊರ ಹೊರೆಗೆ ಇದೆ. ಮನೆಯ ಹಿಂದಿನ ಬಾಗಿಲನ್ನು ಕಲ್ಲಿನಿಂದ ಜಜ್ಜಿದ್ದಾರೆ. ಬಾಗಿಲು ಮುರಿಯುತ್ತಿರುವ ಶಬ್ದ ಹೇಳಿ ಪದ್ಮಾವತಮ್ಮ ವರಾಂಡಕ್ಕೆ ಬಂದು ನೋಡುವ ಹೊತ್ತಿಗೆ ಇಬ್ಬರ ದರೋಡೆ ಕೋರರು ಒಳಪ್ರವೇಶಿಸಿದ್ದಾರೆ.
ಮಹಿಳೆಯನ್ನು ಕಟ್ಟಿಹಾಕಿದರು: ಕೂಡಲೇ ಅವರು ಹನುಮಂತ ರೆಡ್ಡಿ ಎಂಬುವವರಿಗೆ ಪೋನ್ ಮಾಡಲು ಯತ್ನಿಸಿದಾಗ ಮೊಬೈಲನ್ನು ಕಸಿದುಕೊಂಡ ಆಕೆಯನ್ನು ಕಟ್ಟಿಹಾಕಿದ್ದಾರೆ. ಬಳಿಕ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ 1ಲಕ್ಷ ನಗದು ಸೇರಿ ಸುಮಾರು ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸಿಪಿಐ ನಾಗರಾಜ್, ಪಿಎಸ್‌ಐ ಶಿವಕುಮಾರ್, ಹಾಗೂ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.