ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಆಗ್ರಹ

Rashmi Kasaragodu
Updated On : 13 Jul 2014, 1:41 am

ಬಂಗಾರಪೇಟೆ: ತಾಲೂಕಿನಲ್ಲಿ ದಿನ ನಿತ್ಯ ಅಕ್ರಮ ಮರಳು ಮಾರಾಟ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ಸಹ ತಾಲೂಕು ಆಡಳಿತ ಕಡಿವಾಣ ಹಾಕುವ ಬದಲು ಮರಳು ಮಾಫಿಯಾದೊಂದಿಗೆ ಕೈ ಜೋಡಿಸಿದ್ದು ಕೂಡಲೆ ಜಿಲ್ಲಾಡಳಿತ ಇದಕ್ಕೆ ಲಗಾಮು ಹಾಕಿ ಕೆರೆಗಳನ್ನು ಉಳಿಸಬೇಕೆಂದು ರೈತ ಸಂಘದ ಹಾಗೂ ಹಸಿರುವ ಸೇನೆ ಮುಖಂಡರು ಒತ್ತಾಯಿಸಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪ್ರಮುಖ ಕೆರೆಗಳು ಬರಿದಾಗಿವೆ. ಇದನ್ನು ನೆಪ ಮಾಡಿಕೊಂಡು ಕೆಲ ಮರಳು ಮಾಫಿಯಾದವರು ತಾಲೂಕಿನ ಎಲ್ಲಾ ಕೆರೆಗಳಲ್ಲಿ ಯಾವುದೇ ಭಯವಿಲ್ಲದೆ ಹಗಲಲ್ಲೆ ಮರಳನ್ನು ಲೂಟಿ ಮಾಡುತ್ತಿದ್ದರೂ ತಾಲೂಕು ಆಡಳಿತ ಮಾತ್ರ ಮೌನವಾಗಿದೆ. ಮರಳು ಲೂಟಿಕೋರರಿಗೆ ತಾಲೂಕು ಆಡಳಿತ ಸಹಕಾರ ನೀಡುತ್ತಿದೆ ಎಂಬುದಕ್ಕೆ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳು ಲೂಟಿಯೇ ಸಾಕ್ಷಿ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement