ಎಡಿಸಿ ಕಾರ್ಯಕ್ಕೆ ಡಿಸಿ ಡಿ.ಕೆ. ರವಿ ಮೆಚ್ಚುಗೆ
ಕೋಲಾರ: ಜಿಲ್ಲಾಡಳಿತ ಸುಗಮವಾಗಿ ನಡೆಯಲು ಕೇವಲ ಜಿಲ್ಲಾಧಿಕಾರಿಯೊಬ್ಬರಿಂದ ಸಾಧ್ಯವಾಗದು, ಅಪರ ಜಿಲ್ಲಾಧಿಕಾರಿ ಹಾಗೂ ಇನ್ನಿತರ ಸಿಬ್ಬಂದಿಯ ಸಹಕಾರ ಅತಿಮುಖ್ಯವಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು ಅವರಿಗೆ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಯಾದ ಹಿನ್ನಲೆಯಲ್ಲಿ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ನವೀನ್ ಕುಮಾರ್ ರಾಜು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಜಿಲ್ಲಾ ಆಡಳಿತಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ಇವರು ಇನ್ನಷ್ಟು ಕ್ರಿಯಾಶೀಲತೆಯಿಂದ ಕೆಲಸ ಮಾಡಿ ಕೀರ್ತಿ ಸಂಪಾದಿಸಲಿ ಎಂದರು. ಕಂದಾಯ ಅದಾಲತ್, ಪೋಡಿ ಅದಾಲತ್‌ಗಳಲ್ಲಿ ತಮಗೆ ಎಡಿಸಿ ಹೆಚ್ಚಿನ ನೆರವು ನೀಡುತ್ತಿದ್ದರು, ಅದರಿಂದ ಯಶಸ್ಸು ಕಾಣಲು ಸಾಧ್ಯವಾಯಿತು. ವೃತ್ತಿಯ ನಡುವೆ ಮಾನಸಿಕ ಒತ್ತಡಗಳು ಇದ್ದಾಗ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು ಎಂದರು. ಬೀಳ್ಕೊಡುಗೆ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು ಮಾತನಾಡಿದರು.