ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯರಿ: ನವೀನ್ ಕಿರಣ್

Rashmi Kasaragodu
Updated On : 13 Jul 2014, 1:41 am

ಚಿಕ್ಕಬಳ್ಳಾಪುರ: ಒಳ್ಳೆಯ ವಿದ್ಯೆಯನ್ನು ಕಲಿಸಿದ ಗುರುಗಳ ಮಾರ್ಗದರ್ಶನದಂತೆ ನಡೆದುಕೊಂಡು ಒಳ್ಳೆಯ ಹೆಸರನ್ನು ಪಡೆಯಬೇಕು. ಈ ಮೂಲಕ ಗುರುವಿನ ಋಣವನ್ನು ತೀರಿಸಬೇಕೆಂದು ಶ್ರೀ ಕೆ.ವಿ. ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್  ಕಿರಣ್  ತಿಳಿಸಿದರು. ಅವರು ನಗರದ ಹೊರವಲಯದ ಶ್ರೀ ಕೆ.ವಿ. ದೈಹಿಕ ಶಿಕ್ಷಣ ಮಹಾವಿಧ್ಯಾಲಯದಲ್ಲಿ ಜಿ.ಕೆ.ಶಿಷ್ಯವೃಂದದಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗುರುಗಳ ಆದರ್ಶ ಬೋಧನೆ, ತತ್ವಗಳನ್ನು ಪಾಲಿಸಿಕೊಂಡು ಉತ್ತಮ ಜೀವನವನ್ನು ನಡೆಸಿದಾಗ ಗುರುಗಳಿಗೆ ಕೀರ್ತಿ ತಂದಾಂತಾಗುತ್ತದೆ ಎಂದರು. ಡಾ.ಆರ್ .ವೆಂಕಟೇಶ್, ಜಿ.ಕೆ. ಶಿಷ್ಯರಾದ ಜಿ.ವಿ.ಮಂಜುನಾಥ್, ವಿ.ಶ್ರೀನಿವಾಸಚಾರಿ, ವೆಂಕಟರಮಣ್, ಸಿ.ಎಸ್.ಬಾಲಕೃಷ್ಣ ಇದ್ದರು.


ಅಗೆದಿರುವ ಗುಂಡಿ ಮುಚ್ಚಲು ಸಾರ್ವಜನಿಕರ ಆಗ್ರಹ


ಬಾಗೇಪಲ್ಲಿ: ಪಟ್ಟಣದ ಬಿಜಿಎಸ್ ಶಾಲೆಯ ಮುಂಭಾಗದಲ್ಲಿ ಕಳೆದ ಒಂದು ತಿಂಗಳ ಹಿಂದೆ ಅಗೆದಿರುವ ಗುಂಡಿಯನ್ನು ಮುಚ್ಚುವಲ್ಲಿ ಯುಜಿಡಿ ಕಾಮಗಾರಿ ಗುತ್ತಿಗೆದಾರರು ನಿರ್ಲಕ್ಷ್ಯ ತೋರುತ್ತಿರುವುದರಿಂದ ಶಾಲೆಗೆ ಬರುವಂತಹ ಮಕ್ಕಳು ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ತಕ್ಷಣ ಗುಂಡಿಯನ್ನು ಮುಚ್ಚಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಕಳೆದ ಒಂದು ವರ್ಷದಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಯು ಮಂದಗತಿಯಲ್ಲಿ ನಡೆಯುತ್ತಿದೆ. ಕಳೆಪೆ ಗುಣಮಟ್ಟದಿಂದ ಕೂಡಿದೆ ಹಾಗೂ ಗುತ್ತಿಗೆದಾರರು ತಮ್ಮ ಮನಬಂದಂತೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮವಹಿಸದೇ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದಾರೆಂದು ಬಿಜಿಎಸ್  ಶಾಲಾ ಮಕ್ಕಳ ಪೋಷಕರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement