ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಕಿತ್ಸೆ ಕೊರತೆಯಿಂದ ಗರ್ಭಿಣಿ ಸಾವು: ಪರಿಹಾರಕ್ಕೆ ಶಾಸಕರ ಆಗ್ರಹ

Rashmi Kasaragodu
Updated On : 13 Jul 2014, 1:45 am

ಚಿಂತಾಮಣಿ: ವೈದ್ಯರ ನಿರ್ಲಕ್ಷ್ಯದಿಂದ ಸೂಕ್ತ ಚಿಕಿತ್ಸೆ ಕೊರತೆಯಿಂದ ಮೃತಪಟ್ಟ ಲಕ್ಷ್ಮಿ ಕುಟುಂಬಕ್ಕೆ ಸರ್ಕಾರದಿಂದ ರು. 5 ಲಕ್ಷ ಪರಿಹಾರ ನೀಡಬೇಕು. ಮತ್ತು ಡಾ. ಜಯಂತಿಯನ್ನು ಅಮಾನತುಪಡಿಸಿ ಸರ್ಕಾರಿ ಆಸ್ಪತ್ರೆಗೆ ಉತ್ತಮ ವೈದ್ಯರನ್ನು ನೇಮಕ ಮಾಡಬೇಕೆಂದು ಜೆಡಿಎಸ್ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.
ಬಟ್ಲಹಳ್ಳಿ ಗ್ರಾಮಕ್ಕೆ ಶನಿವಾರದಂದು ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆಗೆ ಚಾಲನೆ ನೀಡಲು ಆಗಮಿಸಿದಾಗ ಸುತ್ತಮುತ್ತಲಿನ ಗ್ರಾಮಸ್ಥರ ವಿವಿಧ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಕಳೆದ ವಾರ ಚಿಂತಾಮಣಿ ನಗರದ ಬಂಬೂ ಬಜಾರ್ ನಿವಾಸಿ ಲಕ್ಷ್ಮಿ 9 ತಿಂಗಳಿನ ತುಂಬು ಗರ್ಭಿಣಿಗೆ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಯಂತಿ ರು. 10 ಸಾವಿರಕ್ಕಾಗಿ ಪೀಡಿಸಿ, ನೀಡದಿದ್ದ ಕಾರಣಕ್ಕೆ ತಾಯಿ ಹೊಟ್ಟೆಯಲ್ಲಿನ ಮಗು ಹೆರಿಗೆಯಾಗದೆ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಪ್ರಕರಣವನ್ನು ವಿಧಾನಸಭೆ ಸದನದಲ್ಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ಸಂಬಂಧಪಟ್ಟ ಸಚಿವರ ಹಾಗೂ ಮುಖ್ಯಮಂತ್ರಿಗಳಿಗೆ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement