ದ್ವಿಚಕ್ರವಾಹನ,ಕ್ಯಾಂಟರ್ ಡಿಕ್ಕಿ: ಇಬ್ಬರ ಸಾವು
ಮಾಲೂರು: ವೇಗವಾಗಿ ಬಂದ ಕ್ಯಾಂಟರ್ ಒಂದು ದ್ವಿಚಕ್ರ ವಾಹನ ಸವಾರನಿಗೆ ನೇರವಾಗಿ ಗುದಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಚೆನ್ನಕಲ್ಲು ಗ್ರಾಮದ ಬಳಿ ಶನಿವಾರ ನಡೆದಿದೆ. ಮೃತನನ್ನು ತಾಲೂಕಿನ ಮಾಸ್ತಿ ಹೋಬಳಿಯ ಶ್ಯಾಮಶೆಟ್ಟಿ ಹಳ್ಳಿ ನಿವಾಸಿ ಶ್ರೀನಿವಾಸ್(48)ಎಂದು ಗುರುತಿಸಲಾಗಿದೆ. ತನ್ನ ವ್ಯವಹಾರ ಮುಗಿಸಿಕೊಂಡು ತನ್ನ ಸ್ವಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಮಾಸ್ತಿ ಕಡೆಯಿಂದ ಬಂದ ಕ್ಯಾಂಟರ್ ನೇರವಾಗಿ ಡಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದೆ.
ಘಟನೆ ವೀಕ್ಷಿಸಿದ ಸ್ಥಳೀಯರು ಗಾಯಾಳು ಶ್ರೀನಿವಾಸ ನನ್ನು ರಕ್ಷಣೆ ಮಾಡುವ ಯತ್ನ ನಡೆಸಿದರಾದರೂ, ಪ್ರಯೋಜನವಾಗಲಿಲ್ಲ. ಘಟನೆ ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಕ್ಯಾಂಟರ್ ತನಿಖೆಯಲ್ಲಿದ್ದಾರೆ.