ನಟ ಶಿವರಾಜಕುಮಾರ್ ಹುಟ್ಟುಹಬ್ಬ ಆಚರಣೆ
ಬಂಗಾರಪೇಟೆ: ನಟ ಡಾ. ಶಿವರಾಜಕುಮಾರ್ 52ನೇ ಹುಟ್ಟು ಹಬ್ಬವನ್ನು ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿಮಾನಿಗಳ ಸಂಘದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲಗಳನ್ನು ಹಂಚುವ ಮೂಲಕ ಆಚರಿಸಿದರು. ನಂತರ ಮಾತನಾಡಿದ ಶಿವಣ್ಣ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕಣಿಂಬೆಲೆ ರಾಮಪ್ರಸಾದ್, ಶಿವಣ್ಣ ಸರಳವಾಗಿ ಜೀವನ ನಡೆಸುತ್ತಾ ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು. ಡಾ.ಶಿವಣ್ಣ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಆಂಜನೇಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಅಭಿಮಾನಿಗಳು ನೆರವೇರಿಸಿದರು.ನಂತರ ನೆರೆದಿದ್ದ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ವೆಂಕಟೇಶ್ ಕಮ್ಮಿ, ಶ್ರೀನಿವಾಸಗೌಡ, ಕನ್ನಡ ರಮೇಶ್, ಬೈರೇಗೌಡ, ಚಿದಾನಂದ, ಪ್ರಮೀನ್, ಮುನಿರಾಜು, ಮಂಜುನಾಥ್,ಪ್ರಭಾಕ್, ರಾಜ್ಕುಮಾರ್, ನಾಗರಾಜ್ ಮೊದಲಾದವರಿದ್ದರು.