ಬಾಗೇಪಲ್ಲಿ ಸಾಯಿಬಾಬಾ ಮಂದಿರದಲ್ಲಿ ಪೂಜೆ
ಬಾಗೇಪಲ್ಲಿ: ಗುರು ಪೌರ್ಣಮೆ ಅಂಗವಾಗಿ ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸಾಯಿ ಬಾಬಾ ರವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಶ್ರೀ ಶಿರಡಿ ಸಾಯಿನಾಥ ಸೇವಾ ಟ್ರಸ್ಟ್ ವತಿಯಿಂದ ಅದ್ಧೂಯಾಗಿ ನಡೆದ ಮಹೋತ್ಸವದ ಪ್ರಯುಕ್ತ ಶಿರಡಿ ಸಾಯಿ ಬಾಬಾ ರವರಿಗೆ ಫಲ ಪಂಚಾಮೃತಾಭಿಷೇಕ, ಸತ್ಯನಾರಾಯಣ ಪೂಜೆ, ಧೂಪಾರತಿ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಭಕ್ತರು ಶ್ರೀ ಸಾಯಿ ಬಾಬಾ ದರ್ಶನವನ್ನು ಪಡೆದರು.