'ವಿದ್ಯಾರ್ಥಿಗೆ ಪ್ರಶ್ನಾ ಮನೋಭಾವ ಅಗತ್ಯ'
ತುಮಕೂರು: ವಿದ್ಯಾರ್ಥಿಗೆ ಪ್ರಶ್ನಾ ಮನೋಭಾವ ಅತ್ಯಗತ್ಯ. ಮನಸ್ಸನ್ನು ನಿಗ್ರಹಿಸಿದರೆ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಡಿಡಿಪಿಐ ದೊಡ್ಡಹಾಲಪ್ಪ ಅಭಿಪ್ರಾಯಪಟ್ಟರು. ಕೊರಟಗೆರೆಯ ಇರಕಸಂದ್ರ ಕಾಲೋನಿಯ ಸಪೂಪ ಕಾಲೇಜಿನಲ್ಲಿ ಏರ್ಪಾಟಾಗಿದ್ದ ಕ್ರೀಡೆ, ಸಾಂಸ್ಕೃತಿಕ, ಎನ್ಎಸ್ಎಸ್ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನ ಯಶಸ್ವಿಗೆ ಏಕಾಗ್ರತೆ, ಮನೋ ನಿಗ್ರಹ, ತಾದ್ಯಾತ್ಮ, ಗುರು-ಹಿರಿಯರ ಮಾರ್ಗದರ್ಶನ ಅತ್ಯಗತ್ಯ. ಅಷ್ಟೇ ಅಲ್ಲ ಶಿಕ್ಷಕರು ಹೇಳಿದ್ದೆಲ್ಲವನ್ನು ವಿದ್ಯಾರ್ಥಿ ಒಪ್ಪಬಾರದು. ಅದನ್ನು ಪ್ರಶ್ನಿಸುತ್ತಾ, ತಮ್ಮ ಅರಿವಿಗೆ ತಂದುಕೊಳ್ಳಬೇಕು ಎಂದು ತಿಳಿಸಿದರು. ತೀತಾ ಪಪೂ ಕಾಲೇಜಿನ ಪ್ರಾಂಶುಪಾಲ ಲಕ್ಕಮುತ್ತಯ್ಯ, ಮುಖ್ಯ ಅತಿಥಿ ಡಾ. ಗೋವಿಂದರಾಯ, ಕಾಲೇಜಿನ ಪ್ರಾಚಾರ್ಯ ಎಸ್. ಸದಾಶಿವಯ್ಯ ಮಾತನಾಡಿದರು. ರುದ್ರಾರಾಧ್ಯ ಸ್ವಾಗತಿಸಿ, ನಾಗಮಣಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಾರೆಡ್ಡಿ, ತಿಪ್ಪೇಸ್ವಾಮಿ, ಡಾ.ಮುದ್ದುವೀರಪ್ಪ ಇತರರು ಉಪಸ್ಥಿತರಿದ್ದರು.