ವಿಶೇಷ ನೃತ್ಯ ಆ. 9ರಂದು
ಕುಣಿಗಲ್: ನರ್ತನಪುರಿ ಸ್ನೇಹ ಮಿತ್ರ ಮಂಡಳಿ. ಕುಣಿಗಲ್ ಇವರ ಆಶ್ರಯದಲ್ಲಿ ಆಗಸ್ಟ್ 9ರಂದು ಜಿಕೆಬಿಎಂಎಸ್ ಬಯಲು ರಂಗ ಮಂದಿರದಲ್ಲಿ ಡಾ. ರಾಜ್ ಕುಮಾರ್ ವಿಶೇಷ ಹಾಡು ಬಾ ಕೋಗಿಲೆ ನಲಿದಾಡು ಬಾರೆ ನವಿಲೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಡಾ. ರಾಜ್ ಚಿತ್ರದ ಹಾಡುಗಳನ್ನು ಹಾಡುವ, ಡಾ. ರಾಜ್ ಚಿತ್ರದ ಹಾಡುಗಳಿಗೆ ನೃತ್ಯ ಮಾಡುವ ತಂಡಗಳು ಹಾಗೂ ಡಾ. ರಾಜ್ ಚಿತ್ರದ ದೃಶ್ಯಗಳನ್ನು ಅಭಿನಯಿಸುವವರು (ಮಿಮಿಕ್ರಿ) ಈ ಕಾರ್ಯಕ್ರಮದಲ್ಲಿ ಭಾಗವಹಿಸಹುದು. ಆಸಕ್ತಿಯಳ್ಳವರು ತಮ್ಮ ಹೆಸರು, ವಿಳಾಸ, ಭಾವಚಿತ್ರ ಮತ್ತು ಮೊಬೈಲ್ ಸಂಖ್ಯೆಗಳೊಂದಿಗೆ ಜು. 27ರಂದು ಬೆಳಗ್ಗೆ 9.30ಕ್ಕೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹಿಂಭಾಗದಲ್ಲಿನ ಪತಂಜಲಿ ಯೋಗ ಮಂದಿರದಲ್ಲಿ ಧ್ವನಿ ಪರೀಕ್ಷೆಗೆ ಹಾಜರಾಗಲು ಕೋರಿದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಕೆ.ಆರ್. ಕೇಶವ ಮೂರ್ತಿ- 94481 61113, ರಾಮಚಂದ್ರಯ್ಯ -99029 93627, ಜನಾರ್ದನ- 98866 49298, ಎಸ್.ಆರ್. ಚಿಕ್ಕಣ್ಣ -94488 98615, ದಿನೇಶ್ ಕುಮಾರ್- 98455 90721 ಸಂಪರ್ಕಿಸಲು ಮಂಡಳಿ ಪ್ರಕಟಣೆ ಮನವಿ ಮಾಡಿದೆ.
ಬಿಜೆಪಿಗೆ ಹೀನಾಯ ಸ್ಥಿತಿ ಬರಲಿದೆ: ಸಿಐಟಿಯು
ಕುಣಿಗಲ್: ಬೆಲೆಏರಿಕೆ ನೀತಿಯನ್ನು ವಿರೋಧಿಸುತ್ತಾ, ಜನತೆಗೆ ಬೆಲೆ ಏರಿಕೆಯಿಂದ ಮುಕ್ತಿ ಕೊಡಿಸುವ ಭರವಸೆ ನೀಡಿತ್ತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದೇ ರೀತಿ ಬೆಲೆ ಏರಿಕೆ ನೀತಿಗೆ ಒಗ್ಗಿಕೊಂಡು ಹೋದಲ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಆದಂತಹ ಸ್ಥಿತಿಗಿಂತಲೂ ಹೀನಾಯ ಸ್ಥಿತಿ ಬಿಜೆಪಿಗೆ ಬರಲಿದೆ ಎಂದು ಸಿಐಟಿಯು ಮುಖಂಡ ಶಶಿಕುಮಾರ್ ತಿಳಿಸಿದರು. ಶನಿವಾರ, ಸಿಐಟಿಯು ಸಂಘಟನೆ ವತಿಯಿಂದ ಸಂಘಟಿತರಾಗದ ಕಾರ್ಮಿಕರ ಜಾಗೃತಿ, ಸಂಘಟನೆಗಾಗಿ ಹಮ್ಮಿಕೊಳ್ಳಲಾದ ಕಾಂ. ಉಗ್ರಪ್ಪ ಜಾಥಾ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಹುಚ್ಚಮಾಸ್ತಿಗೌಡ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾದ ಕಾರ್ಮಿಕರ ಬಹಿರಂಗ ಸಭೆಯುದ್ದೇಶಿಸಿ ಮಾತನಾಡಿ, ವಿಮಾ ಕ್ಷೇತ್ರ, ರೈಲ್ವೆ ಕ್ಷೇತ್ರ,ಚಿಲ್ಲರೆ ವ್ಯಾಪಾರ ಕ್ಷೇತ್ರ, ಕೈಗಾರಿಕೆ ಕ್ಷೇತ್ರ, ಕೃಷಿ ಕ್ಷೇತ್ರದಲ್ಲೂ ವಿದೇಶಿ ನೇರಬಂಡವಾಳಕ್ಕೆ ಬಿಜೆಪಿ ಸರ್ಕಾರ ಅನುವು ಮಾಡಿಕೊಟ್ಟಿದೆ. ಕಾರ್ಮಿಕರು ಸಂಘಟಿತರಾಗದೆ ಹೋದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಕಾರ್ಮಿಕರು ಎಚ್ಚೆತ್ತು, ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಲು, ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉಗ್ರ ಹೋರಾಟ, ಚಳವಳಿಗಳನ್ನು ಹಮ್ಮಿಕೊಳ್ಳಬೇಕೆಂದರು.ಸಭೆಯಲ್ಲಿ ಜಿಲ್ಲಾಧ್ಯಕ್ಷ ಗುಲ್ಜಾರ್, ಕಾರ್ಯದರ್ಶಿ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷೆ ಶಾಂತಕುಮಾರಿ, ಪುಷ್ಪಲತ, ಗಿರಿಜ, ರತ್ನಮ್ಮ, ಅಣ್ಣಯ್ಯ, ಶ್ರೀನಿವಾಸ್ ಇತರರು ಮಾತನಾಡಿದರು. ಬಿಸಿಯೂಟ, ಆಶಾಕಾರ್ಯಕರ್ತೆಯರು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು