ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾಲ ಮರುಪಾವತಿಸಿ ಸಹಕಾರಿ ಬ್ಯಾಂಕ್ ಬೆಳೆಸಿ

Rashmi Kasaragodu
Updated On : 13 Jul 2014, 1:41 am

ಮಾಲೂರು: ರೈತರ ಅಭಿವೃದ್ಧಿಗಾಗಿ ಸಹಕಾರಿ ಬ್ಯಾಂಕ್‌ಗಳಲ್ಲಿ ಶೇ.3 ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ರೈತರು ಅದರಲ್ಲೂ ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಪ್ಪ ಹೇಳಿದರು.  ಅವರು ಇಲ್ಲಿನ ಜಿಲ್ಲಾ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ತಾಲೂಕಿನ ದೊಡ್ಡ ಶಿವಾರ ರೇಷ್ಮೆ ಬೆಳೆಗಾರರ ಸಂಘದ 37 ಮಂದಿಗೆ ಒಟ್ಟು 34,60,000 ರು.ಗಳ ಕೃಷಿ ಸಾಲದ ಚೆಕ್‌ಗಳನ್ನು ವಿತರಿಸಿ ಮಾತನಾಡಿ,  ರೈತರ ಶ್ರೇಯಸ್ಸಿಗಾಗಿ ಸಹಕಾರಿ ಬ್ಯಾಂಕ್ ಇರುವುದರಿಂದ ಸಾಲ ಪಡೆಯುವ ರೈತರು ಸಾವವನ್ನು ಸಕಾಲದಲ್ಲಿ ಮರು ಪಾವತಿಸಿದರೆ ಬ್ಯಾಂಕ್ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬೇಕಾದರೆ ಅಸ್ತಿ, ಜಮೀನು, ಚಿನ್ನ ಅಡಮಾನ ಇಡುವ ಜತೆಯಲ್ಲಿ ಶೇ.13 ರಷ್ಟು ಬಡ್ಡಿ ದರದಲ್ಲಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಆದರೆ ಸಹಕಾರ ಬ್ಯಾಂಕ್‌ನಲ್ಲಿ ಯಾವುದೇ ಅಡಮಾನವಿಲ್ಲದೆ ಶೇ.6 ರ ಬಡ್ಡಿ ದರದಲ್ಲಿ ಸಾಲಪಡೆಯಬಹುದಾಗಿದೆ ಎಂದರು.  ಬ್ಯಾಂಕಿನ ಜಿಲ್ಲಾ ಪ್ರತಿನಿಧಿ ಶಂಕರನಾರಾಯಣಗೌಡ, ಬೈರ್ನಹಳ್ಳಿ ಸಹಕಾರಿ ಸಂಘದ ಬಿ.ವಿ.ಪಾಪಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement