ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇತಿಹಾಸ ಆಸಕ್ತಿವುಳ್ಳ ಯುವಪಡೆ ಕಟ್ಟಿ: ಡಾ. ಶೇಷಶಾಸ್ತ್ರಿ ಕರೆ

Mainashree
Updated On : 19 Jul 2014, 12:12 pm

ಬಾಗೇಪಲ್ಲಿ: ಜಿಲ್ಲೆಯ ಇತಿಹಾಸದ ಆರಂಭದಿಂದ ಇಂದಿನವರೆಗೂ ಚಾರಿತ್ರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಧ್ಯಯನ ಮಾಡುವ ಆಸಕ್ತಿವುಳ್ಳಂತಹ ಯುವಕರ ತಂಡವನ್ನು ಕಟ್ಟಬೇಕಾಗಿದೆ ಎಂದು 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆರ್. ಶೇಷಶಾಸ್ತ್ರಿ ಕರೆ ನೀಡಿದರು.
  ಸಮ್ಮೇಳನದಲ್ಲಿ ಮಾತನಾಡಿದ ಅವರು, ತಾಲೂಕುಗಳಲ್ಲಿ ಯುವ ಪಡೆ ಕಟ್ಟಿದರೆ ನಮಗೆ ತಿಳಿದಿರುವಂತಹ ಇತಿಹಾಸದ ಅನೇಕ ಅಂಶಗಳ ಬೆಳಕಿಗೆ ಬರುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಯಾರು ಚರಿತ್ರಹೀನರಲ್ಲ, ಪ್ರತಿಯೊಂದು ವಸ್ತು, ನಾವು ಆಚರಿಸುವಂತಹ ಆಚಾರ ವಿಚಾರಗಳು ಸಹ ಚರಿತ್ರಾರ್ಹವೇ. ಉತ್ತಮ ಚರಿತ್ರೆಯಾಗಿದ್ದರೆ ಸ್ವೀಕರಿಸಿ ಇಲ್ಲವೆ ಅದರ ಬಗ್ಗೆ ಅಧ್ಯಯನ ಮಾಡಿ ಬಿಟ್ಟುಬಿಡುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.
   ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಚಿತ್ರಕಲೆ, ನಾಟಿ ವೈದ್ಯಕೀಯ, ನಾಟಕ, ಛಾಯಾಗ್ರಹಣ ಸೇರಿದಂತೆ ಅನೇಕ ರಂಗಗಳಲ್ಲಿ ಹಲವಾರು ಮಂದಿ  ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಬಗ್ಗೆ ಅಧ್ಯಯನ ಮಾಡಬೇಕಾದಂತಹ ಅವಶ್ಯಕತೆ ಇದೆ. ಎಲ್ಲರೂ ಕವಿಗಳು, ಚಿತ್ರಗಾರರು, ನಾಟಕಕಾರ ಕ್ರೀಡಾಪಟುಗಳು ಆಗುತ್ತಾರೆ ಎಂದು ಭಾವಿಸಲಾಗದು, ಕಲೆ, ಕ್ರೀಡೆಯನ್ನು ಆಸ್ವಾಧಿಸುವ, ಮೆಚ್ಚುವ ಸಹೃದಯಿಗಳಾಗುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement