ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮಸ್ಯೆಗೆ ಸ್ಪಂದಿಸದಿದ್ದರೆ ಎತ್ತಂಗಡಿ

Mainashree
Updated On : 20 Jul 2014, 12:19 pm

ಬಂಗಾರಪೇಟೆ: ಕಂದಾಯ ಇಲಾಖೆ ಮತ್ತು ಉಪ ನೊಂದಣಾಧಿಕಾರಿಗಳ ಇಲಾಖೆಯಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು ಇನ್ನು ಮುಂದೆ ಭ್ರಷ್ಟಾಚಾರ ಮುಂದುವರೆಸಿದಲ್ಲಿ ತಕ್ಕ ಶಾಸ್ತಿ ಮಾಡಲಾಗುವುದೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
 ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.  
ಅಧಿಕಾರಿಗಳಿಗೆ ಎಚ್ಚರಿಕೆ: ಸದ್ದಿಲ್ಲದೆ ಹಣ ಮಾಡುವ ಇಲಾಖೆಗಳು ಕಂದಾಯ ಹಾಗೂ ಉಪನೊಂದಾಣಾಧಿಕಾರಿಗಳ ಇಲಾಖೆಯಾಗಿದ್ದು ರೈತರ ಯಾವುದೇ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡದೆ ಬರೀ ಹಣಕ್ಕಾಗಿ ಪೀಡಿಸುತ್ತಾರೆ ಎಂಬ ದೂರುಗಳಿವೆ. ಇದೇ ಕೊನೆ ಅವಕಾಶ ತಮ್ಮ ಕಾರ್ಯವೈಖರಿಯನ್ನು ತಿದ್ದಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಕ್ಷೇತ್ರದಿಂದ ಎತ್ತಂಗಡಿಗೆ ಸಿದ್ದರಾಗುವಂತೆ ಸೂಚಿಸಿದರು.
 ತಾಲೂಕಿನಾದ್ಯಂತ ಸರ್ವೇ ಕಾರ್ಯ ಸಮರ್ಪವಾಗಿ ನಿರ್ವಹಿಸದಿದ್ದರೆ ಪೂಡಿ ಅದಾಲತ್ ಮಾಡುವ ಪ್ರಶ್ನೆಯೇ ನಿರ್ಮಾಣವಾಗುತ್ತಿರಲಿಲ್ಲ ಎಂದ ಅವರು ತಾಲೂಕಿನ ಶಾಸಕರ ಗಮನಕ್ಕೆ ತರದೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಮಗೆ ಇಷ್ಟ ಬಂದ ಹಾಗೆ ಪೂಡಿ ಆದಾಲತ್ ಕಾರ್ಯಕ್ರಮ ರೂಪಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.  ಅದಕ್ಕೆ ಶಿರಸ್ತೆದಾರ್ ಉತ್ತರ ನೀಡಲು ತಡವರಿಸಿದರು.
40 ಲಕ್ಷ ಅನುದಾನ: ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ ಮಾತನಾಡಿದ ಶಾಸಕರು, ಎಲ್ಲಾ ಶಾಲೆಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಕಟ್ಟಡ ನಿರ್ಮಾಣ ಹಾಗೂ ರಿಪೇರಿಗಾಗಿ 40 ಲಕ್ಷ ರು.ಗಳ ಅನುದಾನ ನೀಡುವುದಾಗಿ ಶಾಸಕರು ತಿಳಿಸಿದರು.
 ಅಂಗನವಾಡಿ ಕಟ್ಟಡಗಳ ರೀಪೇರಿ ಮತ್ತು ನಿರ್ಮಾಣಕ್ಕೆ ಎರಡು ವರ್ಷಗಳಿಂದ ಬಿಡುಗಡೆಯಾಗಿ ಬಂದಿರುವ ಹಣ 12.40 ಲಕ್ಷ ರು.ಗಳನ್ನು ತಕ್ಷಣ ಖರ್ಚು ಮಾಡಿ ವರದಿ ನೀಡಲು ಇಓಗೆ ಸೂಚಿಸಿದರು.
 ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷಮ್ಮ, ಉಪಾಧ್ಯಕ್ಷೆ ಶಾಂತಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಯರಾಜ್ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement