ಕೋಲಾರ ಡಿಸಿಸಿ ಬ್ಯಾಂಕ್‌ನಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಶುರು
ಕೋಲಾರ: ಡಿಸಿಸಿ ಬ್ಯಾಂಕಿನತ್ತ ಗ್ರಾಹಕರನ್ನು ಆಕರ್ಷಿಸಲು ಹಾಗೂ ವಾಣಿಜ್ಯ ಬ್ಯಾಂಕ್‌ಗಳಿಗೆ ಸರಿಸಮವಾಗಿ ಹಣಕಾಸಿನ ವ್ಯವಹಾರ ನಡೆಸಲು ಆನ್‌ಲೈನ್ ಹಣ ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.ನಗರದ ಡಿಸಿಸಿ ಬ್ಯಾಂಕಿನಲ್ಲಿ ಸೋಮವಾರ ಅವರು ಕೋರ್ ಬ್ಯಾಂಕಿಂಗ್‌ಗೆ ಚಾಲನೆ ನೀಡಿ ಮಾತನಾಡಿ, ಡಿಸಿಸಿ ಬ್ಯಾಂಕಿನ 13 ಶಾಖೆಗಳಿಗೆ ಅಪೆಕ್ ಬ್ಯಾಂಕಿನಿಂದ ಪ್ರತ್ಯೇಕ ಐಎಫ್‌ಎಸ್‌ಸಿ ಕೋಡ್ ಹಂಚಿಕೆಯಾಗಿದೆ. ಇನ್ನು ಮುಂದೆ ಗ್ರಾಹಕರು ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಬಹುದು ಎಂದು ತಿಳಿಸಿದರು.ಡಿಸಿಸಿ ಬ್ಯಾಂಕ್ ಇದೀಗ ನಡೆಸುತ್ತಿರುವ ನೇಮಕದಲ್ಲಿ ಯಾವುದೇ ಸಂಶಯಗಳಿಗೆ ಅವಕಾಶವಿಲ್ಲ, ಹಣ, ರಾಜಕೀಯ ಒತ್ತಡಗಳಿಗೆ ಮಣಿಯದೆ ಪಾರದರ್ಶಕವಾಗಿ ನಡೆಯಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಬ್ಯಾಂಕಿನ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕ ಕೆ.ವಿ. ದಯಾನಂದ್, ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ, ಮುಖಂಡರಾದ ಹೆಬ್ಬಟ ನಾರಾಯಣಗೌಡ, ಬ್ಯಾಂಕ್‌ನ ವಿವಿಧ ವಿಭಾಗಗಳ ವ್ಯವಸ್ಥಾಪಕರಾದ ಹುಸೇನ್ ದೊಡ್ಡಮನಿ, ಚೌಡಪ್ಪ, ಅರುಣ್, ನಾಗೇಶ್, ಶಿವಕುಮಾರ್, ಖಲೀಮುಲ್ಲಾ, ನಾರಾಯಣಸ್ವಾಮಿ ಮತ್ತಿತರರು ಇದ್ದರು.
ವೈದ್ಯನಾಥನ್ ವರದಿ
ಜಾರಿಯಾಗಲಿ
ಬಾಗೇಪಲ್ಲಿ: ವೈದ್ಯನಾಥನ್ ವರದಿ ಜಾರಿಯಾದರೆ ತಾಲ್ಲೂಕಿನಲ್ಲಿ ನಿಷ್ಕ್ರಿಯಗೊಂಡಿರುವ ಎಲ್ಲ 13 ವ್ಯವಸಾಯ ಸೇವಾ ಸಹಕಾರ ಸಂಘಗಳು ಮತ್ತೆ ಕಾರ್ಯರೂಪಕ್ಕೆ ಬರುತ್ತವೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳ ಉಪಾಧ್ಯಕ್ಷ ಎಚ್.ವಿ. ನಾಗರಾಜ್ ತಿಳಿಸಿದರು. ಪಟ್ಟಣದ ಡಿಸಿಸಿ ಬ್ಯಾಂಕಿನಲ್ಲಿ ಆನ್‌ಲೈನ್ ಬ್ಯಾಂಕಿಂಗ್‌ಗೆ ಚಾಲನೆ ನೀಡಿ, ವೈದ್ಯನಾಥನ್ ವರದಿ ಜಾರಿಯಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 34.83 ಲಕ್ಷ ಅನುದಾನ ಬಿಡುಗಡೆಯಾಗುತ್ತದೆ. ಇದರಿಂದ ಈ ಭಾಗದಲ್ಲಿ ನಿಷ್ಕ್ರಿಯಗೊಂಡಿರುವ ಸೊಸೈಟಿಗಳಿಗೆ ಜೀವದಾನ ಸಿಗುತ್ತದೆ. ಆಗ ಈ ಭಾಗದ ರೈತರಿಗೆ ಸಾಲವನ್ನು ಸುಲಭವಾಗಿ ನೀಡಬಹುದು ಎಂದರು. ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಸುಬಾನ್ ಸಾಭ್ , ಕಾರ್ಯದರ್ಶಿ ನಾಗಭೂಷಣರಾವ್ , ಸಿ.ವೆಂಕಟರವಣ, ಶ್ರೀರಾಮಪ್ಪ, ಟಿ.ಎಚ್ .ರಘುನಾಥ್ , ರಾಮಕೃಷ್ಣ, ವೆಂಕಟರೆಡ್ಡಿ, ಶಿವಾರೆಡ್ಡಿ ಸೇರಿದಂತೆ ಮುಂತಾದವರು ಇದ್ದರು.
ಬ್ಯಾಂಕಿಂಗ್ ಸೌಲಭ್ಯ ಜಾರಿ
ಕೆಜಿಎಫ್: ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯಕ್ಕೆ ಬ್ಯಾಂಕ್‌ನ ನಿರ್ದೇಶಕ ಕೃಷ್ಣೇಗೌಡ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಈ ಹಿಂದೆ ಬ್ಯಾಂಕ್ ಆಡಳಿತ ನಡೆಸಿದ ಕೆಲ ಅಧಿಕಾರಿಗಳ ನಿರ್ಲಕ್ಷದಿಂದ ಬ್ಯಾಂಕ್ ನಷ್ಟದಲ್ಲಿ ಸಾಗುತ್ತಿತ್ತು. ಆದರೆ ನೂತನವಾಗಿ ಬ್ಯಾಂಕ್‌ನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬ್ಯಾಲಹಳ್ಳ ಗೋವಿಂಗದೌಡರ ನೇತೃತ್ವದಲ್ಲಿ ಬ್ಯಾಂಕ್ ಅಭಿವೃದ್ಧಿಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಅದೇ ರೀತಿ ಕ್ಷೇತ್ರದ ಸುಂದರಪಾಳ್ಯ, ಕ್ಯಾಸಂಬಳ್ಳ, ಎನ್.ಜಿ. ಹುಲ್ಕೂರು, ಬೇತಮಂಗಲ ಸೇರಿದಂತೆ ಇತರೆ ಹೋಬಳಿಗಳಲ್ಲಿ ತಮ್ಮ ಶಾಖೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಈ ಸಾಲಭ್ಯವನ್ನು ಕಲ್ಪಿಸಲಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದ ಅವರು ರೈತರಿಗೆ ಮತ್ತು ಮಹಿಳಾ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷದಿಂದ 3ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ನೀಡಲಾಗಿದ್ದು ತಮ್ಮ ಶಾಖೆಯಲ್ಲಿ ಈಗಾಗಲೇ 6 ಸಾವಿರ ಗ್ರಾಹಕರಿದ್ದು ಮುಂದೆ ಹೆಚ್ಚಿನ ಗ್ರಾಹಕರು ತಮ್ಮ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವೇಳೆ ಬ್ಯಾಂಕ್‌ನ ಕೆಎಸ್‌ಸಿಡಿ ಕೋಡ್ ಸಂಖ್ಯೆ 0003001ನ್ನು ಗ್ರಾಹಕರ ಉಪಯೋಗಕ್ಕೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ್, ವಿಎಸ್‌ಎಸ್‌ಎನ್ ಸದಸ್ಯ ಪ್ರಸನ್ನ, ಜಿ.ಪಂ. ಸದಸ್ಯ ನಾರಾಯಣರೆಡ್ಡಿ, ಸಿಬ್ಬಂದಿ ಸುಜಾತ ಮತ್ತಿತರರು ಹಾಜರಿದ್ದರು.
ಅದ್ಧೂರಿ ಜಾತ್ರೆ
ಗೌರಿಬಿದನೂರು: ಮಂಚೇನಹಳ್ಳಿ ಹೋಬಳಿ ಪುರ ಗ್ರಾಪಂ ವ್ಯಾಪ್ತಿಯ ಆರ್ಕುಂದ ಗ್ರಾಮದಲ್ಲಿ ಮೊದಲ ದಿನದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಗ್ರಾಮದ ಪ್ರತಿ ಮನೆಯಲ್ಲಿಯೂ ಹೂವಿನ ಅಲಂಕಾರದೊಂದಿಗೆ ತಂಬಿಟ್ಟಿನಾರತಿಗಳನ್ನು ಹೆಣ್ಣುಮಕ್ಕಳು ಮೆರವಣಿಗೆ ಹೊರಟು ಆಂಜನೇಯಸ್ವಾಮಿಗೆ ಆರತಿ ಬೆಳಗಿದರು. ಗ್ರಾಪಂ ಸದಸ್ಯ ಲಕ್ಷ್ಮಿನಾರಾಯಣ, ಶ್ರೀನಿವಾಸರೆಡ್ಡಿ, ರವಿಕುಮಾರ್, ವಿನಯ್ ಕುಮಾರ್, ಆರ್. ನರಸಿಂಹಮೂರ್ತಿ ಇದ್ದರು.