ಶ್ರೀನಿವಾಸಪುರದಲ್ಲಿ ಜನಜೀವನ ಅಸ್ವಸ್ಥ
ಕೋಲಾರ/ಶ್ರೀನಿವಾಸಪುರ: ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಜಿಲ್ಲಾ ಬಂದ್‌ಗೆ ಶ್ರೀನಿವಾಸಪುರದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಶ್ರೀನಿವಾಸಪುರದಲ್ಲಿ ಸಿಪಿಎಂ ಮತ್ತು ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಮುಂಜಾನೆಯಿಂದ ಬಂದ್ ಆಚರಿಸಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಸಂಪೂರ್ಣವಾಗಿ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಮುಚ್ಚಲ್ಪಟ್ಟಿದ್ದವು. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ವಾಹನಗಳು, ಹೋಟೆಲ್‌ಗಳು ಸ್ಥಗಿತಗೊಂಡಿದ್ದವು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಸೂರ್ಯನಾರಾಯಣ ಪ್ರತಿಭಟನೆ ನೇತೃತ್ವ ವಹಿಸಿದ್ದರು.ಪ್ರತಿಭಟನೆಯಲ್ಲಿ ಪಿ.ಆರ್.ನವೀನ್ ಕುಮಾರ್, ಎನ್.ವೀರಪ್ಪರೆಡ್ಡಿ, ಸಿ.ಎಂ.ಗೌಡ ಭಾಗವಹಿಸಿದ್ದರು.