ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೌರ್ಜನ್ಯ ನಡೆದ ತಕ್ಷಣ ದೂರು ನೀಡಿ: ಡಿವೈಎಸ್‌ಪಿ

Mainashree
Updated On : 25 Jul 2014, 11:49 am

ಶಿಡ್ಲಘಟ್ಟ: ಲೈಂಗಿಕ ದೌರ್ಜನ್ಯ ನಡೆದ ತಕ್ಷಣ ಪೋಲಿಸ್ ಠಾಣೆಗೆ ಬಂದು ದೂರು ನೀಡುವ ಕೆಲಸವಾಗಬೇಕು ಎಂದು ಡಿವೈಎಸ್‌ಪಿ ಸಣ್ಣತಿಮ್ಮಪ್ಪ ತಿಳಿಸಿದರು. ತಾಲೂಕಿನ ದಿಬ್ಬೂರ ಹಳ್ಳಿಯ ಗ್ರಾಮ ಪಂಚಾಯ್ತಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಪೋಲಿಸ್ ಚಿಂತಾಮಣಿ ಉಪ ವಿಭಾಗ ದಿಬ್ಬೂರ ಹಳ್ಳಿ ಪೋಲಿಸ್ ಠಾಣೆ ಹಾಗೂ ಮಹಿಳಾ ಸ್ವಾಂತನ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಕ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಎಲ್ಲಯೇ ಆಗಲಿ ಲೈಂಗಿಕ ದೌರ್ಜನ್ಯಗಳು ನಡೆದ ತಕ್ಷಣ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವ ಕೆಲಸ ಮೊದಲು ಮಾಡಿ. ಇದರಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದರ ಜೊತೆಗೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಮಹಿಳಾ ಸ್ವಾಂತನ ಕೇಂದ್ರದ ಡಾ.ವಿಜಯ ಮಾತನಾಡಿದರು. ಸಭೆಯಲ್ಲಿ ಪಾಲ್ಗೂಂಡಿದ್ದ ಬಹುತೇಕ ಸಾರ್ವ್ವಜನಿಕರು ಶೌಚಾಲಯಗಳ ಕೊರತೆಯಿಂದ ಬಹುತೇಕ ಹೇಣ್ಣು ಮಕ್ಕಳು ಮಹಿಳೆಯರು ಬರ್ಹಿದೆಸೆಗೆ ಬಯಲಿಗೆ ಹೋಗುವುದರಿಂದಲೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಾ.ಧನುಂಜಯರೆಡ್ಡಿ, ಶೌಚಾಲಯಗಳ ನಿರ್ಮಾಣದ ಭರವಸೆ ನೀಡಿದರು. ಸಿ.ಪಿ.ಐ ಶ್ರೀನಿವಾಸಮೂರ್ತಿ, ದಿಬ್ಬೂರ ಹಳ್ಳಿ ಪಿಎಸ್‌ಐ ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಇ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷೀದೇವಮ್ಮ ಇನ್ನಿತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement