ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಲಮೂಲ ಸಂರಕ್ಷಣೆಯಲ್ಲಿ ಎಡುವುದೇಕೆ?

Mainashree
Updated On : 27 Jul 2014, 12:41 pm

ಚಿಕ್ಕಬಳ್ಳಾಪುರ: ಬಯಲುಸೀಮೆ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಹೋರಾಟ ನಡೆಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸರಿಯಾದ ರೀತಿಯಲ್ಲಿ ಗಮನ ಕೊಡಲು ವಿಫಲರಾಗಿದ್ದೇವೆ. ಮರಳು ದಂಧೆ, ಕೆರೆಗಳ ಒತ್ತುವರಿ, ರಾಜಾಕಾಲುವೆಗಳ ನಾಶ, ನದಿಗಳ ಸಂರಕ್ಷಣೆಯ ನಿರ್ಲಕ್ಷ್ಯ. ಹೀಗೆ ಜಲಮೂಲಗಳ ಸಂರಕ್ಷಣೆಯಲ್ಲಿ ನಾವು ಎಡುವುತ್ತಿದ್ದೇವೆ.
ನಗರದ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಜನಸಂಪರ್ಕ ಇಲಾಖೆ ಶನಿವಾರ ಆಯೋಜಿಸಿದ್ದ ಜಲಮೂಲಗಳ ಸಂರಕ್ಷಣೆಯಲ್ಲಿ ಮಾಧ್ಯಮ ಕುರಿತ ವಿಚಾರ ಸಂಕಿರಣದಲ್ಲಿ ಹೊರ ಬಂದ ವಾಸ್ತವಾಂಶ ಅಭಿಪ್ರಾಯ.
ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಫ್ಲೋರೈಡ್ ನೀರನ್ನು ಸೇವಿಸಿ ಜನರು ಫ್ಲೋರೋಸಿಸ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಯಲುಸೀಮೆಯ ಜಿಲ್ಲೆಯ ಜನರ ದಾಹವನ್ನು ತೀರಿಸುವುದರ ಜೊತೆಗೆ ಕೃಷಿಗೆ ನೀರಿನ ಸೌಲಭ್ಯವನ್ನು ನೀಗಿಸಲು ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಬೇಕೆಂದು ಸರ್ಕಾರದ ಮೇಲೆ ಒತ್ತಡವೇನೋ ಹಾಕಲಾಗುತ್ತಿದೆ.ಇದಕ್ಕಾಗಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿರುವುದು ಸಹ ಶ್ಲಾಘನೀಯ. ಆದರೆ, ಈ ಹೋರಾಟಗಳ ನಡುವೆ ಜಲಮೂಲಗಳ ಸಂರಕ್ಷಣೆಯನ್ನು ಮರೆಯುತ್ತಿರುವಂತಹುದು ದುರದೃಷ್ಟಕರ ಎಂದು ವಿಷಾದ ವ್ಯಕ್ತವಾಯಿತು.
ಮೊದಲು ಕಾಪಾಡಿ: ಜನರ ಒತ್ತಡಕ್ಕೆ ಸರ್ಕಾರ ಮಣಿದು ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಅದಕ್ಕೂ ಮುಂಚೆ ಜಿಲ್ಲೆಯಲ್ಲಿರುವ ಕೆರೆಗಳು, ರಾಜಕಾಲುವೆಗಳನ್ನು ಕಾಪಾಡಿ, ಸುಸ್ಥಿತಿಯಲ್ಲಿ ಕೆರೆಗಳು ಮತ್ತು ರಾಜಕಾಲುವೆಗಳಿದಿದ್ದಲ್ಲಿ ನೀರಿಗೆ ಬರ ಬಾರದೇ ಇನ್ನೇನು ಬರುತ್ತದೆ ಎಂಬ ಪ್ರಶ್ನೆ ವಿಚಾರ ಸಂಕಿರಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಜಲತಜ್ಞರಿಂದ ಕೇಳಿ ಬಂತು.
ನೀರನ್ನು ಮಿತವಾದ ಬಳಕೆಯಿಂದ ಉಳಿತಾಯ ಮಾಡುವುದು, ಜಲಮೂಲಗಳನ್ನು ಸಂರಕ್ಷಣೆ ಮಾಡುವುದು ಎರಡೂ ಅಗತ್ಯ. ಇದು ನಮ್ಮೆಲರ ಕೈಯಲ್ಲಿದೆ. ಹನಿಹನಿ ನೀರಿಗೂ ಮಹತ್ವ ಕೊಡಬೇಕು. ಪ್ರಸ್ತುತ ಇದೇ ನಮ್ಮ ಮುಂದಿರುವ ಪ್ರಮುಖ ಮಾರ್ಗ ಎಂದು ಜಲಸಂಪನ್ಮೂಲ ಪ್ರಾಧಿಕಾರದ ಸತ್ಯಮೂರ್ತಿ ತಿಳಿಸಿದರು.
ಕೆರೆಗಳಲ್ಲಿನ ಹೂಳನ್ನು ತೆಗೆದು ರಾಜಕಾಲುವೆಗಳನ್ನು ರಕ್ಷಿಸಬೇಕು. ಅಂತರ್ಜಲ ಮರುಪೂರಣಕ್ಕೆ ಒತ್ತು ಕೊಡುವುದಲ್ಲದೇ ಮಳೆಯ ನೀರನ್ನು ಉಪಯೋಗಿಸಿಕೊಳ್ಳುವಂತಹ ಚಾಕಚಕ್ಯತೆ ಜನರಲ್ಲಿ ಬರಬೇಕಾಗಿದೆ. ಪಂಚಗಿರಿಗಳನ್ನು ಹೊಂದಿರುವ ಚಿಕ್ಕಬಳ್ಳಾಪುರದಲ್ಲಿ ಬೆಟ್ಟಗುಡ್ಡಗಳ ನಡುವೆ ಹರಿಯುವ ನೀರನ್ನು ಕೆರೆಗಳಿಗೆ ಹರಿಯುವಂತೆ ಮಾಡುವುದು ನೀರಿನ ಸಮಸ್ಯೆಯನ್ನು ನೀಗಿಸುತ್ತದೆ ಎಂದು ಜಲತಜ್ಞ ಅಯ್ಯಪ್ಪ ಮಸಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತೊಬ್ಬ ಜಲತಜ್ಞ ಕೆ. ನಾರಾಯಣಸ್ವಾಮಿ,ನೀರಿನ ಮಿತ ಬಳಕೆಯ ಹೊಸ ಹೊಸ ವಿಧಾನಗಳನ್ನು ಜನರಿಗೆ ಪರಿಚಯ ಮಾಡಿಕೊಡಬೇಕೆಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement