ಪ್ರತಿಭೆ ಗುರುತಿಸಲು ಸಾಹಿತ್ಯ ಸಮ್ಮೇಳನ ಸಹಕಾರಿ: ಮುನಿಯಪ್ಪ
ಮಾಲೂರು: ಗಡಿ ಪ್ರದೇಶದಲ್ಲಿ ಕನ್ನಡ ಕಂಪನ್ನು ಪಸರಿಸಲು ಕನ್ನಡ ಸಾಹಿತ್ಯ ಸಮ್ಮೇಳನವು ಸಹಕಾರಿಯಾಗಿದೆ ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು.
ಅವರು ತಾಲೂಕಿನ ಚಿಕ್ಕತಿರುಪತಿಯಲ್ಲಿ ನಡೆದ 3 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಕಸಾಪವು ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೂಸ ಹೊಸ ಪ್ರತಿಭೆಗಳನ್ನು ಹೊರತರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಎತ್ತಿನ ಹೊಳೆ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳ್ಳಲಿದ್ದು, ಜಿಲ್ಲೆಗೆ ತಪ್ಪದೆ ನೀರು ಹರಿದು ಬರಲಿದೆ ಎಂದರು.
ಅರಿವು ಮೂಡಿಸಿ: ಸಮ್ಮೇಳನಾಧ್ಯಕ್ಷ ವೆಂಕಟಾಪು ಸತ್ಯಂ ಮಾತನಾಡಿ ಆಧುನೀಕತೆ ಕಡೆಯ ನಮ್ಮ ನಡಿಗೆ ಪ್ರಕೃತಿ ನಾಶಕ್ಕೆ ಕಾರಣವಾಗುತ್ತಿದೆ.ನಮ್ಮಗೆ ಗೋತ್ತಿಲ್ಲದ ಹಾಗೆ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ನಮ್ಮ ಸ್ವಾರ್ಥದಿಂದ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಎದಿದ್ದೆ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳುವ ಹಾಗೆ ಸಾಹಿತ್ಯಗಳನ್ನು ಇಂದಿನ ಸಾಹಿತಿಗಳು ರಚಿಸಿ ಜನತೆಯಲ್ಲಿ ಅರಿವು ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಪ್ರತಿಭಾ ಪುರಸ್ಕರ ವಿತರಿಸಿದರು.
ಸನ್ಮಾನ: ಸಮಾಜದಲ್ಲಿ ಸಾಧನೆ ಮಾಡಿದ ಲಕ್ಕೂರು ಆನಂದ್, ಸಿ.ಬಿ. ವೀರಭದ್ರಚಾರಿ, ಲಕ್ಕೂರು ದಾಸಪ್ಪ, ಎನ್.ಟಿ.ರಾಜು, ಈ ಭೂಮಿ ಮಂಜುನಾಥ್,ಅಗ್ರಹಾರ ರಮೇಶ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎಸ್.ಎನ್.ರಘುನಾಥ್, ಎಟ್ಟುಕೋಡಿ ವೀರಭದ್ರಪ್ಪ, ಕವಿ ಜ.ಮು. ಚಂದ್ರ, ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕುಂ.ಚಂದ್ರಪ್ಪ, ಕಸಾಪ ಜಿಲ್ಲಾಗೌರವಾಧ್ಯಕ್ಷ ಅಶ್ವಥ್ ರೆಡ್ಡಿ, ತಾಲೂಕು ಅಧ್ಯಕ್ಷ ಮಧುಸೂಧನ್, ಪತ್ರಕರ್ತ ಸಂಘದ ಅಧ್ಯಕ್ಷ ರವೀಂದ್ರ, ಕೆ.ಹೆಚ್.ಚೆನ್ನರಾಯಪ್ಪ, ಎಂ.ಮುನಿರಾಜು, ಪದ್ಮಾಲಯ ನಾಗರಾಜ್,ಹರೀಶ್ ಗೌಡ,ಶಶಿಧರ್,ಎಸ್.ನಾರಾಯಣಸ್ವಾಮಿ,ಡಿ.ಎಂ.ವೆಂಕಟೇಶ್, ಡಿ.ಎಂ.ವಿಜಯಕುಮಾರ್, ಸೋಮಶೇಖರ್ ಇದ್ದರು.
ಪ್ರಕಾಶ್ ಬರಗೂರು ಸ್ವಾಗತಿಸಿದರು. ಉಪನ್ಯಾಸಕ ಆರ್. ಅನಂತಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಜಕಾತಿ ವಂದಿಸಿದರು.