ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹದ್ದು ಮೀರಿದವರಿಗೆ ತಕ್ಕ ಉತ್ತರ ನೀಡಿ

Mainashree
Updated On : 27 Jul 2014, 11:52 am

ಟೇಕಲ್: ಬೆಳಗಾವಿಯ ಯಳ್ಳೂರಿನಲ್ಲಿ ಭಾನುವಾರ ಸುದ್ದಿ ಮಾಡಲು ಹೊರಟಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವು ಪುಂಡರು ಹಲ್ಲೆ ಮಾಡಿರುವುದನ್ನು ಟೇಕಲ್ ಗ್ರಾಮೀಣ ಪತ್ರಕರ್ತರ ವೇದಿಕೆ ಖಂಡಿಸಿದೆ. ಹಲ್ಲೆಗೆ ಕಾರಣರಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೇದಿಕೆಯ ಟೇಕಲ್ ಲಕ್ಷ್ಮೀಶ್, ವೈ.ಸಿ.ರಾಮಕೃಷ್ಣ, ಬನಹಳ್ಳಿ ಮಂಜುನಾಥ್, ಸಂದೀಪ್ ಒತ್ತಾಯಿಸಿದ್ದಾರೆ.  ಕರವೇ ಖಂಡನೆ: ಎಂಇಎಸ್‌ನಿಂದ ಕಾನೂನು ಸಂವಿಧಾನ ಉಲ್ಲಂಘನೆ ಮಾಡಿದ್ದು ಬೆಳಗಾವಿಯ ಯಳ್ಳೂರಿನಲ್ಲಿ ಜಿಲ್ಲಾ ಆಡಳಿತ ನಿರ್ಮಿಸಿದ ನಾಮಫಲಕ ತೆರವುಗೊಳಿಸಿದ ಇವರ ಪುಂಡಾಟಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳೇರಹಳ್ಳಿ ಮಂಜುನಾಥ್, ವೆಂಕಟೇಶ್, ಮುನಿರಾಜು, ಗೋವರ್ದನ್ ಖಂಡಿಸಿದ್ದಾರೆ. ಇದು ಹಿಗೆಯೆ ಮುಂದುವರಿದರೆ ಕನ್ನಡಿಗರು ಸುಮ್ಮನೆ ಕೂರುವುದಿಲ್ಲ ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement