'ಇಸ್ಮಾಯಿಲ್ ಕೃತಿಯಲ್ಲಿ ನವ್ಯದ ಕೌಶಲ್ಯವಿದೆ'
ತುಮಕೂರು: ಸಾಹಿತಿ ಈಚನೂರು ಇಸ್ಮಾಯಿಲ್ ಅವರ ಕೃತಿಯಲ್ಲಿ ನವ್ಯ ಸಾಹಿತ್ಯದ ಕೌಶಲ್ಯವಿದೆ ಎಂದು ಡಾ. ರಾಜಶೇಖರ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಶೈನಾ ಬಳಗದಿಂದ ಆಯೋಜಿಸಲಾಗಿದ್ದ ಈಚನೂರು ಇಸ್ಮಾಯಿಲ್ ಅವರ ಊರೂರು ಅಲೆದು ಉರಿದು ಬಂದಿರುವೆ ತಾಯಿ ಹಾಗೂ ಈಗ ಆನೆಗಳು ಬಂದಿವೆ ಮುಂದೆ ಸಿಂಹಗಳು ಬಂದಾವು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಈಗ ಆನೆಗಳು ಬಂದಿವೆ ಮುಂದೆ ಸಿಂಹಗಳು ಬಂದಾವು ಕೃತಿ ಕುರಿತು ಮಾತನಾಡಿದ ಡಾ. ರಾಜಶೇಖರ್ ಅವರು ಈಚನೂರು ಇಸ್ಮಾಯಿಲ್ ಅವರ ಕೃತಿಯಲ್ಲಿ ನವ್ಯ ಸಾಹಿತ್ಯದ ಕೌಶಲ್ಯವಿದೆ. ಅನುಭಾವಿ ಸಾಲುಗಳು ಕೃತಿಯುದ್ದಕ್ಕೂ ಇದೆ ಎಂದರು. ಇಡೀ ಬರೆಹ ವೈಚಾರಿಕವಾಗಿದೆ ಎಂದರು. ಶೈನಾ ಸಂಸ್ಥೆಯು ಹಲವಾರು ಪ್ರತಿಭೆಗಳನ್ನು ಗುರುತಿಸಿದ್ದು ವೇದಿಕೆ ಕಲ್ಪಿಸಿ ಕೊಡುತ್ತಿರುವುದು ಅಭಿನಂದನೀಯ ಎಂದರು.