ಗುಣಮಟ್ಟ ಕಾಪಾಡಿ
ಶಿಡ್ಲಘಟ್ಟ: ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ನರಸಿಂಹರಾಜು ಹೇಳಿದರು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡುತ್ತಿರುವ ವಾಣಿಜ್ಯ ಸಮುಚ್ಚಯ ಕಾಮಗಾರಿ ವೀಕ್ಷಣೆ ಮಾಡಿ, ಕುಡಿಯುವ ನೀರಿನ ಪೂರೈಕೆಗಾಗಿ ಕೊರೆಸಿರುವ ಕೊಳವೆ ಬಾವಿಗಳನ್ನು ಪರಿಶೀಲನೆ ನಡೆಸಿದರು. ಅವುಗಳಿಗೆ ಅಳವಡಿಸಲು ಖರೀದಿ ಮಾಡಿರುವ ಪಂಪು ಮೋಟಾರುಗಳು, ಕೇಬಲ್ ಪರಿಶೀಲನೆ ನಡೆಸಿದರು.
ಮುಖ್ಯಾಧಿಕಾರಿ ಎಸ್.ಎ. ರಾಮ್ಪ್ರಕಾಶ್, ಎಂಜಿನಿಯರ್ಗಳಾದ ಪ್ರಸಾದ್, ಪವಿತ್ರ, ಮಂಜುನಾಥ್, ರಮೇಶ್ ಇದ್ದರು.