ದೌರ್ಜನ್ಯ ತಡೆಗೆ ದಿಟ್ಟತನ ಅಗತ್ಯ: ನಾಗರಾಜ್
ಗೌರಿಬಿದನೂರು: ವಿದ್ಯಾರ್ಥಿನಿಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ದಿಟ್ಟತನ ಬೆಳೆಸಿಕೊಳ್ಳಿ ಎಂದು ವೃತ್ತನಿರೀಕ್ಷಕ ಕೆ. ನಾಗರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಸುರಕ್ಷತೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆಗೊಳಿಸಬೇಕು, ಬಸ್ ನಿಲ್ದಾಣಗಳಲ್ಲಿ ಪೋಕರಿಗಳಿಂದ ತೊಂದರೆಯಾದಾಗ ತಕ್ಷಣ ದೂರವಾಣಿ ಮೂಲಕ ತಿಳಿಸಿದರೂ ಅವರನ್ನು ಬಂಧಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಕೀಳರಿಮೆ ಬದಿಗೊತ್ತಿ ದೌರ್ಜನ್ಯ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.