ಮಾಹಿತಿ ಕೇಂದ್ರ ಉದ್ಘಾಟನೆ
ಗೌರಿಬಿದನೂರು: ಪಟ್ಟಣದ ಸಿವಿಲ್ನ್ಯಾಯಾಲಯ ಆವರಣದಲ್ಲಿ ಸುಮಾರು 1ಲಕ್ಷ ವೆಚ್ಚದಲ್ಲಿ ನ್ಯಾಯಾಲಯ ಪ್ರಕರಣಗಳ ಇತ್ಯರ್ಥಗಳ ಮಾಹಿತಿ ಕೇಂದ್ರವನ್ನು ಸಿವಿಲ್ ಪ್ರಧಾನ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಉದ್ಘಾಟಿಸಿದರು.
ನಂತರ ಮಾತನಾಡಿ, ಮಾಹಿತಿ ಕೇಂದ್ರದಿಂದ ವಾದಿ ಮತ್ತು ಪ್ರತಿವಾದಿಗಳಿಗೆ ಉಪಯೋಗವಾಗಲಿದ್ದು ವಾಯಿದೆ ದಿನಾಂಕ ಮತ್ತು ನ್ಯಾಯಾಲಯದಲ್ಲಿ ಅಂದಿನ ವಿಚಾರಣೆ ಬಗ್ಗೆ ಆಯಾ ದಿನಾಂಕದ ಸಂಜೆ ಲಭ್ಯವಾಗಿದ್ದು ಪ್ರಕರಣದ ಸಂಖ್ಯೆ ನಮೂದಿಸಿದರೆ ತಕ್ಷಣ ಪೂರ್ಣ ವಿವರ ಲಭ್ಯವಾಗಲಿದೆ ಎಂದು ತಿಳಿಸಿದರು. ಇದರ ಉದ್ದೇಶ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ವಾದ-ಪ್ರತಿವಾದ ಗುಪ್ತವಾಗಿರದೆ ಮುಕ್ತವಾಗಿ ಜನ ಸಾಮಾನ್ಯರಿಗೆ ತಿಳಿಸುವುದೆ ಉದ್ದೇಶ ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕ ತ್ಯಾಗರಾಜು, ಅರ್ಜುನ್ ಮಲ್ಲಿಕ್, ವಕೀಲ ಸಣ್ಣಕ್ಕಿ ವೆಂಕಟರಮಣ, ಎಸ್.ಆರ್. ಪಾರ್ಶ್ವನಾಥ್, ರಾಮಚಂದ್ರಯ್ಯ ಇದ್ದರು.