ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ
ಹುಳಿಯಾರು: ಪಟ್ಟಣದ ಥಿಯೋಸಾಫಿಕಟಿಲ್ ಸೊಸೈಟಿ ವತಿಯಿಂದ ಹುಳಿಯಾರು- ಕೆಂಕೆರೆ ಸರ್ಕಾರಿ ಪ್ರೌಢಶಾಲೆ, ವಾಸವಿ, ಕನಕದಾಸ ಶಾಲೆ ಸೇರಿದಂತೆ ಪಟ್ಟಣದ ಕೆಲ ಶಾಲೆಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.ಹುಳಿಯಾರು -ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದ ಸೊಸೈಟಿಯ ಸೇವಾ ವಿಭಾಗದ ಅಧ್ಯಕ್ಷ ಎಂ.ಆರ್. ಗೋಪಾಲ್ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳನ್ನು ಮಕ್ಕಳ ಪಡೆದುಕೊಳ್ಳುವ ಮೂಲಕ ಶಿಕ್ಷಣ ಪಡೆದು ತಮ್ಮ ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು. ಕಾರ್ಯದರ್ಶಿ ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಜೊತೆಯಲ್ಲಿ ತ್ಯಾಗ, ಸೇವಾ ಮನೋಭಾವ ಮೈಗೊಡಿಸಿಕೊಂಡು ಇತರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಬೇಕು ಎಂದರು. ಉಪಪ್ರಾಂಶುಪಾಲೆ ಡಿ. ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಉಪಾಧ್ಯಕ್ಷ ರಂಗನಕೆರೆ ಮಹೇಶ್,ದೈಹಿಕ ಶಿಕ್ಷಕ ಮನ್ಸೂರ್ ಅಹಮದ್ ಸೇರಿದಂತೆ ಸಹಶಿಕ್ಷಕರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.