ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿದ್ಯಾರ್ಥಿಗಳಿಗೆ ಸಾಹಿತ್ಯದತ್ತ ಒಲವಿರಲಿ: ಅಬ್ಬುಗುಂಡು ಶ್ರೀನಿವಾಸರೆಡ್ಡಿ ಮನವಿ

Rashmi Kasaragodu
Updated On : 31 Jul 2014, 12:06 pm

ಚಿಂತಾಮಣಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಕವನ ಚುಟುಕು, ಕವನಗಳನ್ನು ರಚಿಸಬೇಕೆಂದು  ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸರೆಡ್ಡಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ವೇದಿಕೆ ಮತ್ತು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಮಾಲಿಕೆ 52ರಂತೆ ಶಾಲಾ ಅಂಗಳದಲ್ಲಿ ಕವಿ ಕಾವ್ಯ, ಚುಟುಕು ಚಿಂತನೆ, ಅಚ್ಚಕನ್ನಡ, ಸ್ವಚ್ಛ ಕನ್ನಡ,ಧಾರ್ಮಿಕ ಶ್ಲೋಕ ಹಾಗೂ ವಚನಾಮೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟನೆ ಮಾಡಲಾಯಿತು.
ವಾಚನಾಮೃತ: ಕವನಗಳ ರಚನೆಯಿಂದ ಸಾಹಿತ್ಯ ಕ್ಷೇತ್ರದತ್ತ ಸಾಧನೆಗೈಯಲು ಶಿಕ್ಷಣ ಮುಖ್ಯವಾಗಿದ್ದು ಉತ್ತಮ ಶಿಕ್ಷಣದಿಂದ ಜ್ಞಾನವನ್ನು ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ. ಉತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಭವಷ್ಯವನ್ನು ರೂಪಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ಸಾಹಿತ್ಯದತ್ತ ಪಯಣಿಸುವ ರಚನೆಗಳ ಜೊತೆಗೆ ವಾಚನಾಮೃತ ನಡೆದಿದ್ದು ಇದರಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆಲ್ಲರಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯನಿ ಎನ್. ಮಂಜುಳ, ಎಸ್ಡಿಎಂಸಿ ಅಧ್ಯಕ್ಷ ಕೃಷ್ಣಾರೆಡ್ಡಿ, ಸದಸ್ಯಣಿ ಲಕ್ಷ್ಮಮ್ಮ, ಸೀಕಲ್ ನರಸಿಂಹಪ್ಪ, ಎಂ.ವಿ. ಅಶ್ವ ತ್ಥ ನಾರಾಯಣ, ಕಾಗತಿ ವಿ. ವೆಂಕಟರತ್ನಂ, ಆರ್. ಶಿವಕುಮಾರ್, ಶಿ.ಮ. ಮಂಜುನಾಥ್, ಕೆ.ಎಸ್. ನೂರುಲ್ಲಾ ಉಪಸ್ಥಿತರಿದ್ದರು. ಜನಪದ ಕಲಾವಿದ ಸೂರಪ್ಪಲ್ಲಿ ಚಂದ್ರಶೇಖರ್ ಮತ್ತು ತಂಡದಿಂದ ಜನಪದ ಹಾಡುಗಳ ಗಾಯನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement