ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಳಪೆ ಬಿತ್ತನೆ ಬೀಜ ಬಿತ್ತನೆ: ಬೆಳೆ ನಷ್ಟ

Rashmi Kasaragodu
Updated On : 1 Aug 2014, 1:29 am

ಗೌರಿಬಿದನೂರು: ತಾಲೂಕಿನ ದೊಡ್ಡಕುರುಗೋಡು ಗ್ರಾಮದ ರೈತ ಹನುಮಂತ ರೆಡ್ಡಿಯವರು ಖಾಸಗೀ ಕಂಪನಿಯೊಂದರ ಹೈಬ್ರೀಡ್ ಮುಸಕಿನ ಜೋಳ ಬಿತ್ತನೆ ಮಾಡಿದ್ದು ಅದು ಬೆಳೆ ಬಾರದೆ ನಷ್ಟ ಆಗಿದೆ ಎಂದು ಆರೋಪಿಸಿದ್ದಾರೆ.
ಖಾಸಗೀ ಕಂಪನಿಯ ಬಿತ್ತನೆ ಜೋಳವನ್ನು 6.5 ಎಕರೆ ಭೂಮಿಯಲ್ಲಿ ಬಿತ್ತನೆ ನಡೆಸಲು 5ಕೆಜಿಯ 12 ಬ್ಯಾಗ್ ಖರೀದಿಸಿ ಬಿತ್ತನೆ ಮಾಡಿದ್ದು, ಕಂಪನಿಯ ಅಧಿಕಾರಿಗಳು ಪ್ರತಿ ಎಕರೆಗೆ 32 ರಿಂದ 35 ಕ್ವಿಂಟಲ್ ಇಳುವರಿ ಬರುತ್ತದೆ ಎಂದು ಹೇಳಿದ್ದರು. ಆದರೆ ಪ್ರತಿ ಎಕರೆಗೆ ಕೇವಲ 12 ಕ್ವಿಂಟಲ್ ಕೂಡಾ ಬರುವುದಿಲ್ಲ ಎಂದು ಅಳವತ್ತುಕೊಂಡಿದ್ದಾರೆ.
ಈ ಕುರಿತು ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ವಿಜ್ಞಾನಿಗಳ ಜೊತೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಾರೆ ಎಂದು ನುಣಿಚಿಕೊಳ್ಳುತ್ತಿದ್ದಾರೆ.
ಮುಸಕಿನ ಜೋಳದ ತೆನೆಗೆ ಬರಲು 55 ದಿನ ಬೇಕು. ಆದರೆ ಈ ಕಂಪನಿಯ ಬೆಳೆ 41 ದಿನಕ್ಕೆ ತೆನೆ ಬೆಳೆವಣಿಗೆಯಾಗಿದ್ದು, ಕೋಡಲೆ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಜೋಳದ ಕಂಪನಿ ಅಧಿಕಾರಿಗಳು ಬೆಳೆ ಪರಿಶೀಲನೆ ನಡೆಸಿ ನಷ್ಟವನ್ನು ಭರಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement