ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗ್ರಾಮಗಳು ಅಭಿವೃದ್ಧಿಯಾಗಬೇಕು'

Rashmi Kasaragodu
Updated On : 1 Aug 2014, 1:29 am

ಮಾಲೂರು: ಕೈಗಾರಿಕೀಕರಣ ಜತೆಯಲ್ಲಿ ಗ್ರಾಮಗಳ ಅಭಿವೃದ್ಧಿ ನಡೆಯಬೇಕೆಂದು ಹೊಂಡಾ ಮೋಟಾರ್ ಸೈಕಲ್, ಸ್ಕೂಟರ್ ಇಂಡಿಯಾ ಪ್ರೈ.ಲಿ.ಉಪಾಧ್ಯಕ್ಷ ಹರಭಜನ್ ಸಿಂಗ್ ಹೇಳಿದರು.
ತಾಲೂಕಿನ ಮಿಂಡಹಳ್ಳಿ ಗ್ರಾಮದಲ್ಲಿ ಕಂಪನಿ ವತಿಯಿಂದ ನಿರ್ಮಿಸಲಾಗಿದ್ದ ಡಾಂಬರೀಕಣಗೊಂಡ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿ ಮಾತನಾಡಿದರು. ಇಲ್ಲಿನ ಶಾಸಕರ ಮನವಿ ಮೇರೆಗೆ ಈ ಗ್ರಾಮದ ರಸ್ತೆ ಡಾಂಬರೀಕರಣ ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಇದೇ ರೀತಿಯಲ್ಲಿ ಮಾಲೂರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು. ಶಾಸಕ ಮಂಜುನಾಥ್ ಗೌಡ ಮಾತನಾಡಿ, ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ನೀಗಿಸಲು ಬೆಂಗಳೂರಿನ ಎಲೆ ಮಲ್ಲಪ್ಪನ ಕೆರೆ ನೀರನ್ನು ಸಂಸ್ಕರಿಸಿ ನೀರು ಹರಿಸುವ ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಡ ತರಲಾಗುವುದು ಎಂದು ತಿಳಿಸಿದರು. ನಾಗವೇಣಿ ಚಂದ್ರು, ಜಗನ್ನಾಥ ಚಾರಿ, ನವನೀತಮ್ಮ, ರಾಮಕೃಷ್ಣಪ್ಪ, ಸತ್ಯನಾರಾಯಣ, ಅಲೂಮಂಜು,ಪಚ್ಚಪ್ಪ, ಮಾಲಾದ್ರಿ, ವಕಲೇರಿ ರಾಮು, ವಿನಯ್ ಧೀಂಗ್ರ, ಎಚ್.ಆರ್.ಪಾಟೀಲ್ ಕಾರ್ಯಕ್ರಮದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement