ಅನುದಾನ ದುರುಪಯೋಗ: ಲೋಕಾಯುಕ್ತರಿಂದ ಪರಿಶೀಲನೆ
ಚಿಂತಾಮಣಿ: ಕೆ.ಗೊಲ್ಲಹಳ್ಳಿ ಗ್ರಾಮದಿಂದ ಕೆರೆ ಅಂಗಳದ ರಸ್ತೆವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಯೋಜನೆ ಅಡಿಯಲ್ಲಿ ಅನುದಾನವನ್ನು ದರುಪಯೋಗ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಲು ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿ ಬೋಪಯ್ಯ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು. ಈ ಬಗ್ಗೆ ನಾರಾಯಣಾಚಾರಿ ಎಂಬುವವರು ದೂರು ನೀಡಿದ್ದರು.
ಭೇಟಿ ವೇಳೆ, ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನಂತರ ಗ್ರಾಮಸ್ಥರ ಅಭಿಪ್ರಾಯಗಳನ್ನು ಪಡೆದರು. ಇದು ಮೇಲ್ನೋಟಕ್ಕೆ ಕಾಮಗಾರಿ ಕೈಗೊಳ್ಳದೆ ಇರುವ ಬಗ್ಗೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಮುಂದುವರೆಸಿರುವುದಾಗಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಸುಮಾರು 1.80 ಲಕ್ಷ ಅನುದಾನ ತಾಪಂ ಹಾಗೂ ನೆರೇಗಾ ಅನುದಾನ ಬಿಡುಗಡೆಗೊಂಡಿರುವ ದಾಖಲೆಗಳನ್ನು ಪಿರ್ಯಾದುದಾರ ನಾರಾಯಣಾಚಾರಿ ಲೋಕಾಯುಕ್ತ ಅಧಿಕಾರಿ ದೂರು ಸ್ವಿಕೃತ ಸಮಿತಿಗೆ ಸಲ್ಲಿಸಿದ್ದಾರೆ. ಗ್ರಾಮಸ್ಥರಾದ ಸಿತಾರಾಮರೆಡ್ಡಿ, ನಾರಾಯಣಸ್ವಾಮಿ, ರಾಮಾಚಾರಿ, ಲಕ್ಷ್ಮಿನಾರಾಯಣ, ಬಾಬುರೆಡ್ಡಿ, ವೆಂಕಟರವಣಾಚಾರಿ, ಮಂಜುನಾಥರೆಡ್ಡಿ, ವೆಂಕಟರೆಡ್ಡಿ ಇನ್ನೂ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.