ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಂತಾಮಣಿ ತಾಲೂಕಲ್ಲಿ ಮಳೆ: ಬೆಳೆ ಹಾನಿ

Rashmi Kasaragodu
Updated On : 4 Jun 2014, 1:43 am

ಬೆಳೆದು ನಿಂತ ಲಕ್ಷಾಂತರ ರುಪಾಯಿ ಮೌಲ್ಯದ ಟೊಮೆಟೋ, ಮಾವಿನ ಫಸಲು ನಷ್ಟ

ಚಿಂತಾಮಣಿ: ತಾಲೂಕಿನ ವ್ಯಾಪ್ತಿಯಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. ಅಲ್ಲದೆ, ಕೆಲವೆಡೆ ಮರಗಳು ನೆಲಕ್ಕುರಳುದ್ದರಿಂದ ಸಂಚಾರ ಅಸ್ತವ್ಯಸ್ತವಾಗಿ, ಜನಜೀವನ ದುಸ್ತರವಾಗಿತ್ತು.
ಗುಟ್ಟಹಳ್ಳಿ, ನಾಯಿಂದ್ರಹಳ್ಳಿ, ಕೊಂಗನಹಳ್ಳಿ, ನಾಯಿಂದ್ರಹಳ್ಳಿ ಕಾಲೋನಿ, ಕೈವಾರ ಸುತ್ತುಮುತ್ತಲೂ ಸೇರಿದಂತೆ ವಿವಿಧೆಡೆ ಭಾರಿ ಮಳೆ ಸುರಿದಿದೆ. ಟೊಮೆಟೋ ಬೆಳೆ ಸಂಪೂರ್ಣ ನಷ್ಟವಾಗಿದೆ. ಮತ್ತೊಂದೆಡೆ ಮಾಡಿಕೆರೆ, ಜೋಗ್ಯಾನಹಳ್ಳಿ, ಮರಿನಾಯಕನಹಳ್ಳಿ, ಬಂದಾರ್ಲಹಳ್ಳಿ ಸೇರಿದಂತೆ ಸುತ್ತಮುತ್ತಲು ಸುರಿದ ಮಳೆಯಿಂದ ಮಾವಿನ ಫಸಲು ಹಾಳಾಗಿದ್ದು, ರೈತರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ.
ಬಾರಿ ಗಾಳಿಗೆ ನಾಯಿಂದ್ರಹಳ್ಳಿ ಕಾಲೋನಿಯಲ್ಲಿ ತೆಂಗಿನ ಮರಮೊಂದು ನೆಲಕ್ಕುರುಳಿದೆ. ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ರಾತ್ರಿ ಪೂರ್ತಿ ವಿದ್ಯುತ್ ಇರಲಿಲ್ಲ.  
ರೈತರಲ್ಲಿ ಸಂತಸ: ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ 2 ದಿನಗಳಿಂದ ಮಳೆ ಬಿದ್ದು ಅಲ್ಪ-ಸ್ವಲ್ಪ ಪ್ರಮಾಣದ ಮಳೆ ನೀರು ಕೆರೆ ಕುಂಟೆಗಳಿಗೆ ನೀರು ಹರಿದಿದೆ. ಅಂತರ್ಜಲ ಸ್ವಲ್ಪ ಹೆಚ್ಚಾಗಿದ್ದರಿಂದ ಬೋರ್‌ವೆಲ್‌ಗಳಿಗೆ ಜೀವ ಬಂದಿದೆ. ಇದರಿಂದ ರೈತರ ಮೊಗದಲ್ಲಿ ಸಂತಸದ ಕಳೆ ಎದ್ದು ಕಾಣುತ್ತಿದೆ. ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement