ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾ ಕೃಷಿ ಇಲಾಖೆಗೆ ಸಿಬ್ಬಂದಿ ಕೊರತೆ

Rashmi Kasaragodu
Updated On : 4 Jun 2014, 1:45 am

ಕೋಲಾರ: ಜಿಲ್ಲೆಯ ಕೃಷಿ ಇಲಾಖೆಗೆ 202 ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 86 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದರು.
ಮಂಗಳವಾರ ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕೃಷಿ ಸಹಾಯಕರ ಕೊರತೆ ಇರುವುದರಿಂದ ಸರ್ಕಾರದ ವಿವಿಧ ಸವಲತ್ತುಗಳನ್ನು ರೈತರಿಗೆ ತಲುಪಿಸಲು ಕಷ್ಟವಾಗುತ್ತದೆ. ಜೊತೆಗೆ ರೈತರಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸೂಕ್ತ ಮಾರ್ಗದರ್ಶನ, ತರಬೇತಿಗೂ ಸಮಸ್ಯೆಯಾಗಿದೆ ಎಂದರು.  ಸರ್ಕಾರಕ್ಕೆ ಸಿಬ್ಬಂದಿಯ ಕೊರತೆ ಬಗ್ಗೆ ಸಾಕಷ್ಟು ಬಾರಿ ಪತ್ರ ಮುಖೇನ ಗಮನಕ್ಕೆ ತರಲಾಗಿದೆ. ಈ ಸಮಸ್ಯೆ ಕೇವಲ ಕೋಲಾರ ಜಿಲ್ಲೆಗೆ ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಕೊರತೆ ಇದ್ದು, ಸರ್ಕಾರ ಇತ್ತೀಚೆಗೆ ಸಿಬ್ಬಂದಿಯ ಕೊರತೆ ನಿವಾರಣೆಗೆ ಗಮನ ಹರಿಸುತ್ತಿದೆ ಎಂದು ಹೇಳಿದರು. ಜಿಲ್ಲೆಯ 27 ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯವಿರುವಷ್ಟು ಸಿಬ್ಬಂದಿ ಒದಗಿಸಿಲ್ಲ. ಜಿಲ್ಲೆಯ ಕೃಷಿ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳು 202, ಭರ್ತಿ ಆಗಿರುವುದು 86, 103 ಹುದ್ದೆಗಳು ಖಾಲಿ ಇವೆ. ಕೃಷಿ ಇಲಾಖೆಯೊಂದಿಗೆ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಸಂಬಂಧ ಸರ್ಕಾರದಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಅಭಿಪ್ರಾಯ ಸಂಗ್ರಹಣೆ ಹಾಗೂ ಸಾಧಕ-ಬಾಧಕಗಳ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿದೆ. ಒಂದು ವೇಳೆ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆ ಜತೆ ವಿಲೀನಗೊಳಿಸಿದರೆ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಹಾಗೂ ಸಹಕಾರ ಸಿಗುತ್ತದೆ ಎಂದು ಅಭಿಪ್ರಾಯಿಸಿದರು.


ಕೃಷಿ ಇಲಾಖೆಯ ಸಿಬ್ಬಂದಿಯ ಪ್ರಸ್ತುತ ವಿವರ
ಹುದ್ದೆಗಳು                  ಮಂಜೂರು    ಭರ್ತಿ           ಖಾಲಿ ಹುದ್ದೆ
ಕೃಷಿ ಅಧಿಕಾರಿಗಳು              44             14              30
ಕೃಷಿ ಅಧಿಕಾರಿ(ರೈ.ಮಿ)           3              1                2
ಆಡಳಿತ ಅಧಿಕಾರಿ                1              0                1
ಅಧೀಕ್ಷಕರು                     6              4                2
ಕೃಷಿ ಸಹಾಯಕರು              58              6                52
ಎಸ್‌ಡಿಸಿ                 12               6                6
ಬೆರಳಚ್ಚುಗಾರರು                8               5                3
ವಾಹನ ಚಾಲಕರು               6               5                1
ಡಿ.ಗ್ರೂಪ್ ನೌಕರರು             22              16               6
ಒಟ್ಟು                      160            57               103


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement