ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಧರೆಗುರುಳಿದ 18 ವಿದ್ಯುತ್ ಕಂಬಗಳು

Rashmi Kasaragodu
Updated On : 4 Jun 2014, 1:43 am

ಬಂಗಾರಪೇಟೆ: ಸೋಮವಾರ ಸಂಜೆ ತಾಲೂಕುನಾದ್ಯಂತ ಸುರಿದ ಭಾರಿ ಗಾಳಿ ಮಳೆ ಮತ್ತು ಸಿಡಿಲಿಗೆ ಮೃತಪಟ್ಟ ಕುರಿಗಾಹಿ ಅವರ ಮನೆಗೆ ಶಾಸಕ ಎಸ್.ಎನ್.ನಾರಾಣಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಪ್ರಕೃತಿ ವಿಕೋಪವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರು ಸಿಡಿಲು ಮಳೆ ಬರುವಾಗ ಜಾಗೃತರಾಗಿ ಮನೆಗಳನ್ನು ಸೇರಿಕೊಳ್ಳುವುದು ಉತ್ತಮ. ಅಲ್ಲದೆ, ಮೃತ ಹಂಸವೇಣಿ ಕುಟುಂಬಕ್ಕೆ ಎಪಿಎಂಸಿವತಿಯಿಂದ ಒಂದು ಲಕ್ಷ ರುಪಾಯಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
18 ವಿದ್ಯುತ್ ಕಂಬ ನೆಲಸಮ: ಸೋಮವಾರ ಸುರಿದ ಗಾಳಿ ಮಳೆಗೆ ಪಟ್ಟಣದಲ್ಲಿ 18 ಕಡೆ ವಿದ್ಯುತ್ ಕಂಬಗಳು ನೆಲ ಕಚ್ಚಿರುವುದರಿಂದ ಮಂಗಳವಾರ ದಿನವಿಡೀ ವಿದ್ಯುತ್ ಪೂರೈಕೆ ಇರಲಿಲ್ಲ. ಹಲವು ಗ್ರಾಮಗಳಲ್ಲಿ ಬಿರುಗಾಳಿಗೆ ಮನೆಗಳ ಮೇಲ್ಚಾವಣಿ ಹಾಗೂ ಗೋಡೆಗಳು ಕುಸಿದಿವೆ. ಸಂತ್ಸಸ್ತ ಗ್ರಾಮಗಳಿಗೂ ಶಾಸಕ ನಾರಾಯಣಸ್ವಾಮಿ ಭೇಟಿ ನೀಡಿದರು. ಕೂಡಲೇ ವಿದ್ಯುತ್ ಕಂಬಗಳನ್ನು ನೆಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಾಜಿ ಶಾಸಕರ ಭೇಟಿ: ಇದೇ ವೇಳೆ ಮೃತ ಹಂಸವೇಣಿ ಕುಟುಂಬಕ್ಕೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಭೇಟಿ ನೀಡಿ, 5 ಸಾವಿರ ಪರಿಹಾರ ನೀಡಿ ಸಾಂತ್ವನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement