ರೇಷ್ಮೆ ತ್ಯಾಜ್ಯಗಳಿಂದ ಜೈವಿಕ ಇಂಧನ
ಶಿಡ್ಲಘಟ್ಟ: ರೇಷ್ಮೆ ಬೆಳೆಯುವ ರೈತರು ಬೆಳೆ ತ್ಯಾಜ್ಯಗಳಿಂದ ಜೈವಿಕ ಇಂಧನ ಹಾಗೂ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧ್ಯಕ್ಷ ವಾಮನಾಚಾರ್ ಹೇಳಿದರು.
ತಾಲೂಕಿನ ಬೆಳ್ಳೂಟಿ, ಸೊಣ್ಣೇನಹಳ್ಳಿ, ಗ್ರಾಮಗಳಿಗೆ ಭೇಟಿ ನೀಡಿ ರೇಷ್ಮೆ ಬೆಳೆ ಉತ್ಪಾದನೆ ಬಗ್ಗೆ ಮಾಹಿತಿ ಪಡೆದ ಬಳಿಕ ತಲದುಮ್ಮನಹಳ್ಳಿ ಗ್ರಾಮದಲ್ಲಿ ರೇಷ್ಮೆ ಬೆಳೆಗಾರರು ಹಾಗೂ ರೈತರೊಂದಿಗೆ ಸಂವಾದ ನಡೆಸಿದರು.
ಡಿಸೇಲ್, ಪೆಟ್ರೋಲ್ ಬೆಲೆಗಳು ಗಗನಕ್ಕೇರಿದ್ದು, ಮುಂದಿನ ದಿನಗಳಲ್ಲಿ ಇಂಥ ಇಂಧನಗಳ ಲಭ್ಯತೆ ಪ್ರಮಾಣ ಕಡಿಮೆಯಾಲಿವೆ. ಆದ್ದರಿಂದ ಪರ್ಯಾಯವಾಗಿ ಜೈವಿಕ ಇಂಧನದಂತೆ ರೇಷ್ಮೆ ಬೆಳೆ ತ್ಯಾಜ್ಯಗಳಿಂದ ಜೈವಿಕ ಇಂಧನ ತಯಾರಿಸಬಹುದು. ಬ್ರೆಜಿಲ್ ಮಾದರಿಯಲ್ಲಿ ಎಥೆನಾಲ್ ಉಪಯೋಗಿಸಿಕೊಂಡು ವಾಹನಗಳನ್ನು ಚಾಲನೆ ಮಾಡುವಂಥ ಪ್ರಯತ್ನ ನಡೆಯುತ್ತಿದ್ದು, ಕಬ್ಬಿನ ಸಿಪ್ಪೆಯಿಂದಲೂ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದಲ್ಲಿನ 54 ಸಕ್ಕರೆ ಕಾರ್ಖಾನೆಗಳಿಂದ ಸಿಗುವಂಥ ಕಬ್ಬಿನ ಸಿಪ್ಪೆಯಿಂದ ಎಥೆನಾಲ್ ತಯಾರಿಕೆ ಮಾಡುತ್ತಿದ್ದು, ರಾಜ್ಯ 3 ನೇ ಸ್ಥಾನದಲ್ಲಿದೆ ಎಂದರು.
ಕೆ.ಎಸ್.ಬಿ.ಡಿ.ಬಿ. ಸದಸ್ಯ ದಿವಾಕರ್ ಬಾಬು, ರಾಮಕೃಷ್ಣ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸದಸ್ಯ ಡಾ.ರಾಜಣ್ಣ ಐಐಎಸ್‌ಇ ಸದಸ್ಯ ಉಡುಪಿ ಶ್ರೀನಿವಾಸ್, ರೇಷ್ಮೆ ಇಲಾಖೆ ಜಿಲ್ಲಾ ಉಪನಿರ್ದೇಶಕ ನಾಗಭೂಷಣ್, ಜಿಪಂ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ರೇಷ್ಮೆ ಇಲಾಖೆ ಸಹಾಯಕ ಉಪನಿರ್ದೇಶಕ ಚಂದ್ರಪ್ಪ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ವಿಸ್ತರಣಾಧಿಕಾರಿ ರೀಲಿಂಗ್ ರಾಮ್ಕುಮಾರ್, ಮಳ್ಳೂರು ಶಿವಣ್ಣ, ನಿರಂಜನ್, ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ವೀರಾಪುರ ಮುನಿರೆಡ್ಡಿ, ಮುಂತಾದವರು ಹಾಜರಿದ್ದರು.