ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿಕ್ಷಕರಿಗೆ ರಾಧಾಕೃಷ್ಣ ಆದರ್ಶ: ತಳಗವಾರ ಆನಂದ್

Rashmi Kasaragodu
Updated On : 4 Jun 2014, 1:45 am

ಚಿಂತಾಮಣಿ: ಭಾರತದ ಶಿಕ್ಷಣ ದಾರ್ಶಿನಿಕ ಡಾ. ಎಸ್.ರಾಧಾಕೃಷ್ಣ ಅವರ ಚಿಂತನೆಗಳು ಶಿಕ್ಷಕರಿಗೆ ಮಾರ್ಗದರ್ಶನವಾಗಿವೆ. ಶಿಕ್ಷಕ ವೃತ್ತಿ ಆತ್ಮತೃಪ್ತಿಯ ವೃತ್ತಿ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅವರು ಅಭಿಪ್ರಾಯಪಟ್ಟರು. ಕೈವಾರದ ಕಲ್ಯಾಣಸೌಧ ಕಲ್ಯಾಣ ಮಂಟಪದಲ್ಲಿ ಮುಳಬಾಗಲಿನ ರಮಪ್ರಿಯಾ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಸಮುದಾಯ ಶಿಕ್ಷಣ ಶಿಬಿರದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾದಾನ ಶ್ರೇಷ್ಠ ದಾನ. ಒಮ್ಮೆ ವಿದ್ಯೆಯನ್ನು ಶಿಸ್ತುಬದ್ಧವಾಗಿ ಕಲಿತರೆ ಜೀವನ ಪೂರ್ತಿ ವಿದ್ಯೆಯು ಕಾಪಾಡುತ್ತದೆ ಎಂದು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ರೆಡ್ಡಿ ಮಾತನಾಡಿದರು. ಪ್ರವಚನಕಾರ ತಳಗವಾರ ಆನಂದ್ ಅವರನ್ನು ರಮಪ್ರಿಯ ಶಿಕ್ಷಣ ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು. ಉಪನ್ಯಾಸಕರಾದ ನಾರಾಯಣಸ್ವಾಮಿ, ಜಯರಾಮರೆಡ್ಡಿ, ಸವಿತ, ನಾಗಭೂಷಣ್ ಮತ್ತು ಶಿಕ್ಷಣ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement