ಹಾಸ್ಟೆಲ್‌ಗಳಿಗೆ ತಾಪಂ ಇಒ ಭೇಟಿ
ಮಾಲೂರು: ಪಟ್ಟಣದಲ್ಲಿನ ಹಾಸ್ಟೆಲ್‌ಗಳಿಗೆ ತಾಪಂ ಇಒ ಸಂಜೀವಪ್ಪ ಮಂಗಳವಾರ ಭೇಟಿ ನೀಡಿ, ಹಾಸ್ಟೆಲ್‌ಗಳ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಬುಧವಾರದಿಂದಲೇ ಸರ್ಕಾರಿ ಬಾಲಕ ಹಾಗೂ ಬಾಲಕಿಯರ ಹಾಸ್ಟೆಲ್‌ಗಳು ಸೇರಿದಂತೆ ಎಲ್ಲ ಹಂತದ ಹಾಸ್ಟೆಲ್‌ಗಳು ಪ್ರಾರಂಭವಾಗಲಿವೆ. ಈ ನಿಟ್ಟಿನಲ್ಲಿ ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯ, ಸರಬರಾಜುವಾಗುತ್ತಿರುವ ಆಹಾರದ ಗುಣಮಟ್ಟ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಹಾಸ್ಟೆಲ್ ಮೇಲ್ವಿಚಾರಕರು ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಪಂ ಅಧಿಕಾರಿ ಗೋಪಾಲಕೃಷ್ಣ, ಪ್ರಭಾರಿ ವಿಸ್ತಿರಣಾಧಿಕಾರಿ ನಾರಾಯಣಪ್ಪ, ಲಕ್ಷಣ್ ಗೌಡ, ಮೇಲ್ವಿಚಾರಕಿ ಸುಮಿತ್ರ ಇದ್ದರು.