ಕನ್ನಡಪ್ರಭ ವರದಿ ಪ್ರಸ್ತಾಪಿಸಿದ ಜಡ್ಜ್
ಮುಖ್ಯ ಅತಿಥಿಯಾಗಿದ್ದ ನ್ಯಾಯಾಧೀಶ ಎಸ್.ಜಿ.ಸಲೆಗರ್ ಅವರು 'ಕನ್ನಡಪ್ರಭ'ದ ಗುರುವಾರ ಸಂಚಿಕೆಯಲ್ಲಿ ಪ್ರಕಟವಾದ ವರದಿಯನ್ನು ಪ್ರಸ್ತಾಪಿಸಿ, ಪರಿಸರ ಪ್ರೇಮಿಗಳು ಸುಮಾರು 8 ಸಾವಿರ ಎಕರೆ ಪ್ರದೇಶದಲ್ಲಿ ಕಾಡನ್ನು ಬೆಳೆಸಿದ್ದಾರೆ. ಇಂಥ ಪ್ರಯತ್ನಗಳಾಗಬೇಕು. ಕಾಡು ಉಳಿಸಿ ಬೆಳೆಸಿದರೆ ಮಾತ್ರ ಮಳೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ನಮ್ಮ ಸ್ವಾರ್ಥದಿಂದಾಗಿ ಕಾಡು ಪ್ರಾಣಿ, ಪಕ್ಷಿಗಳನ್ನು ಮೃಗಾಲಯಗಳಲ್ಲಿ ನೋಡುವ ಪರಿಸ್ಥಿತಿ ಎದುರಾಗಿದೆ. ಮುಂದಿನ ಪೀಳಿಗೆಗೆ ನಾವು ಭಾವಚಿತ್ರಗಳ ಮುಖಾಂತರ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ತೋರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.