ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೀಲು ಜೋಡಣೆ ಶಿಬಿರ

Rashmi Kasaragodu
Updated On : 6 Jun 2014, 2:19 am

ಕೋಲಾರ: ಆಸ್ಟ್ರೇಲಿಯಾ ದೇಶದ ಬೆನ್ಸ್‌ಬರ್ಡ್ ಆಸ್ಪತ್ರೆಯಲ್ಲಿ ಕೀಲು ಜೋಡಣೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಕೋಲಾರದ ಡಾ.ನಿರಂಜನ್ ಅವರು ನಗರದ  ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಂಡಿ ಜೋಡಣೆಯ ಮೂರು ದಿನದ ಶಿಬಿರವನ್ನು ಹಮ್ಮಿಕೊಂಡಿದ್ದಾರೆ ಎಂದು ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಕೀಲು ಮತ್ತು ಮೂಳೆ ರೋಗದ ತಜ್ಞ ರಾದ ಪ್ರೊ. ಡಾ.ಮನೋಹರ್ ತಿಳಿಸಿದರು.
ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದ ಸುತ್ತಮುತ್ತಲಿನ ಗ್ರಾಮದ ಹಾಗೂ ನಗರದ ಬಿಪಿಎಲ್ ಕಾರ್ಡ್‌ದಾರರಾಗಿರುವ 60 ವರ್ಷ ಮೇಲ್ಪಟ್ಟು ವೃದ್ಧರಿಗೆ ಉಚಿತ ತಪಾಸಣೆ, ಚಿಕಿತ್ಸೆ  ಹಾಗೂ ಔಷಧಿಗಳನ್ನು ನೀಡಲಾಗುವುದು ಎಂದರು.
ಉಚಿತ ಶಸ್ತ್ರ ಚಿಕಿತ್ಸೆಗೆ 25 ಮಂದಿ ಪಟ್ಟಿ ಮಾಡಿ, ನಂತರ ಅರ್ಹರಾದ 8 ಫಲಾನುಭವಿಗಳ ಆಯ್ಕೆ ಮಾಡಲಾಗುವುದು. ಹೃದಯ ತೊಂದರೆ ಇದ್ದವರಿಗೆ ನಾರಾಯಣ ಹೃದಾಲಯದಲ್ಲಿ ತಪಾಸಣೆ ನಡೆಸಿ ಅರ್ಹರರಿಗೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಹೇಳಿದರು. ಖಾಸಗಿ ರೋಗಿಗಳಿಗೂ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ 2.5 ಲಕ್ಷ. ಆದರೆ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಕೇವಲ 1 ಲಕ್ಷ ಗಳಿಗೆ ಮಂಡಿ ಚಿಕಿತ್ಸೆಯನ್ನು  ಮಾಡಲಾಗುವುದು ಎಂದು ತಿಳಿಸಿದರು.
ಕಡಿಮೆ ವಯಸ್ಸಿನವರಿಗೆ ಮಂಡಿ ಸವೆದಿದ್ದರೆ ಚಿಕಿತ್ಸೆ ಮಾಡಿದರೂ ಸಹ 10 ವರ್ಷದ ನಂತರ ಮತ್ತೆ ಚಿಕಿತ್ಸೆಗೆ ಒಳ ಪಡಿಸಬೇಕಾಗುವುದು. ಆದರೆ 60 ವರ್ಷ ಮೇಲ್ಪಟ್ಟವರಿಗೆ ಮಂಡಿ ಚಿಕಿತ್ಸೆಯಲ್ಲಿ ಸುಧಾರಣೆ ಕಂಡು ಬರುವುದು ಎಂದು ಸ್ಪಷ್ಟ ಪಡಿಸಿದರು. ಡಾ. ನಿರಂಜನ್ ಇದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಅವರೊಂದಿಗೆ ಇಬ್ಬರು ಸಹಾಯಕ ವೈದ್ಯರು ಹಾಗೂ ಮೂರ್ನಾಲ್ಕು ಸಿಬ್ಬಂದಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಈ ಶಿಬಿರವನ್ನು ಆಯೋಜಿಸಲು ಚಿಂತಿಸಲಾಗಿತ್ತು. ಕಾರಣಾಂತರಗಳಿಂದ ಮುಂದೂಡಲಾಗಿತ್ತು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement