ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತುಳಿತಕ್ಕೊಳಗಾದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ

Rashmi Kasaragodu
Updated On : 6 Jun 2014, 2:24 am

ಕೋಲಾರ: ಅಹಿಂದ ವರ್ಗಕ್ಕೆ ಸೇರಿದ ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಿಸುವ ಮೂಲಕ ಸಂವಿಧಾನ ಶಿಲ್ಪಿ ಡಾ.ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವಲ್ಲಿ ಶಿಕ್ಷಕರು ಹೆಚ್ಚಿನ ಮಹತ್ವ ತೋರಬೇಕೆಂದು ಕೆಪಿಸಿಸಿಯ ಪರಿಶಿಷ್ಟ ವರ್ಗದ ರಾಜ್ಯ ಉಪಾಧ್ಯಕ್ಷ ಹಾಗೂ ಹಾರೋಹಳ್ಳಿಯ ಸರ್ಕಾರಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಹಾರೋಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಪರಿಶಿಷ್ಟರ ಮತ್ತು ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಹಲವಾರು ಯೋಜನೆ ಜಾರಿಗೆ ತಂದಿದ್ದು, ಇವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಇದಕ್ಕೂ ಮುನ್ನ ಬಡಾವಣೆಯ ಮನೆ ಮನೆಗೆ ತೆರಳಿ  ಕಲಿಯುವ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಪ್ರೇರೇಪಿಸಲಾಯಿತು. ಈ ವೇಳೆ, ಶಾಲಾ ಸಮಿತಿಯ ಸದಸ್ಯರಾದ ಎ.ವಿ.ವೆಂಕಟರಮಣಪ್ಪ, ಎಂ.ಸುರೇಶ್, ಸಿ.ಆರ್.ಪಿ.ಎಂ.ಸುರೇಶ್, ಬಾಬು, ಮುಖ್ಯ ಶಿಕ್ಷಕಿ ಬಿ.ಆರ್.ಜ್ಯೋತಿ, ಶಿಕ್ಷಕರಾದ ಎಂ.ಶಾರದಾಂಬ, ವಿ.ಎಸ್.ವೀಣಾ, ಎಂ.ನಾಗರತ್ನಮ್ಮ, ಎಸ್.ಶಾರದ, ಎಂ.ಕಲಾವತಿ ಮತ್ತಿತರರು ಇದ್ದರು.


ಅನುಭವದಿಂದ ಕೃಷಿಯಲ್ಲಿ ಯಶಸ್ವಿಯಾಗಲು ಸಾಧ್ಯ


ಮಾಲೂರು: ಕೃಷಿ ಥಿಯರಿಗಿಂತ ಅನುಭವದಿಂದ ಯಶಸ್ವಿಯಾಗಲು ಸಾಧ್ಯ ಎಂಬುದನ್ನು ರೈತರು ಅರಿಯಬೇಕು ಎಂದು ವಿಜ್ಞಾನಿ ಶಶಿಕುಮಾರ್ ಎಂದರು.
ಇಲ್ಲಿನ ಕೃಷಿ ಇಲಾಖೆ ಪಟ್ಟಣದ ಹೂರವಲಯದ ಪಿಎಸ್‌ಐ ಭವನದಲ್ಲಿ ಗುರುವಾರ ಆಯೋಜಿಸಿದ್ದ 2 ನೇ ಹಂತದ ಭೂ ಚೇತನ ಯೋಜನೆಯ ತಾಲೂಕು ಮಟ್ಟದ ಕಾರ್ಯಗಾರದಲ್ಲಿ ಮಾತನಾಡಿ, ಕೃಷಿಕರು ಭೂಮಿಯ ಮಣ್ಣು ಕಾಲಕಾಲಕ್ಕೆ ಪರೀಕ್ಷೆ ಮಾಡಿಸುವ ಜತೆಗೆ ಬೆಳೆಗೆ ಬೇಕಾದ ಗೂಬ್ಬರದ ಅರಿವು ಇರಬೇಕು ಎಂದರು. ಸಹಾಯಕ ಅಧಿಕಾರಿ ಭವ್ಯರಾಣಿ ಮಾತನಾಡಿ, ರಾಜ್ಯ ಸರ್ಕಾರ ಕಳೆದ ವರ್ಷ ಪ್ರಾರಂಭಿಸಿದ ಭೂಚೇತನ ಯೋಜನೆಯಿಂದ ಬೆಳೆ ಇಳುವರಿ ಶೇ.21 ರಿಂದ 45 ರಷ್ಟು ಹೆಚ್ಚಾಗಿತ್ತು. ಈ ಯೋಜನೆಯ ಫಲಿತಾಂಶದಿಂದ ಪ್ರೇರಿತರಾಗಿ ಶೇ.20 ರಷ್ಟು ಉತ್ಪಾದನೆಯ ಗುರಿ ಇಟ್ಟುಕೊಂಡು ಭೂ ಚೇತನ ಯೋಜನೆಯನ್ನು ಎರಡನೇ ಹಂತಕ್ಕೆ ವಿಸ್ತರಿಸಲಾಗಿದೆ ಎಂದರು. ಆಧುನಿಕ ಮಾಹಿತಿ ತಂತ್ರಜ್ಞಾನಗಳಿಂದ ರೈತರ ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರ ಒದಗಿಸುವ ಜತೆಯಲ್ಲಿ ಈ ಯೋಜನೆಯಲ್ಲಿ ಪಾಲ್ಗೂಳ್ಳುವ ಸಂಸ್ಥೆಗಳ ವಿಸ್ತರಣಾ ಅಧಿಕಾರಿಗಳ ಹಾಗೂ ರೈತರ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವೆಂದರು. ಜಿಕೆವಿಕೆ ಕೃಷಿ ವಿಜ್ಞಾನಿ ನಿರಂಜನಮೂರ್ತಿ, ಕೆ.ವಿ.ಕೆ.ನೂರುಲ್ಲಾ ಕೃಷಿ ರೈತರಿಗೆ ಉಪಾನ್ಯಾಸ ನೀಡಿದರು. ಎಎಒ ಸುನೀತಾ, ಸವಿತಾ, ಮುನಿರಾಜು, ಪ್ರಕಾಶ್ ಬಾಬು,ಸತೀಶ್ ಇದ್ದರು. ಇದೇ ಸಂಧರ್ಭದಲ್ಲಿ ರಾಜಗಿರಿ ಬೆಳೆ ಬೆಳೆಯಲು ಗುರ್ತಿಸಲಾಗಿದ್ದ ತಾಲೂಕಿನ ನೂರು ರೈತರಿಗೆ ವಿಜ್ಞಾನಿಗಳಿಂದ ಬಿತ್ತನೆ ಬೀಜ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement