ಪರಿಸರ ಸಂರಕ್ಷಣೆ ಅಗತ್ಯ
ಬಾಗೇಪಲ್ಲಿ: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದೆ ಬಂದು ಮರ ಗಿಡಗಳನ್ನು ಹೆಚ್ಚಿಗೆ ಬೆಳೆಸಬೇಕೆಂದು ಸಿವಿಲ್ ನ್ಯಾಯಾಧೀಶ ಎನ್.ಎಂ. ರಮೇಶ್ ಹೇಳಿದರು. ಶ್ರೀಜಡಲ ಬೈರವೇಶ್ವರಸ್ವಾಮಿ ದೇವಾಲಯದ ಬಳಿಯಿರುವ ಇಕೋ ಪಾರ್ಕಿನಲ್ಲಿ ಪುರಸಭೆ, ಅಂಗನವಾಡಿ,ಅರಣ್ಯ ಇಲಾಖೆ, ಪ್ರಥಮ ದರ್ಜೆ ನ್ಯಾಯಾಲಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಆರ್.ಶ್ರೀಕಾಂತ್, ಸರಕಾರಿ ಅಭಿಯೋಜಕಿ ಪಿ.ಕೃಷ್ಣವೇರಿ, ಅಧಿಕಾರಿಗಳಾದ ಗಂಗಮ್ಮ, ಆರ್.ರಾಮಚಂದ್ರಪ್ಪ, ಎ.ಮುರಳೀಧರ್, ಮರಿಯಾ ರೋಜ್, ಮೇಸ್ತ್ರೀ ಅಮರು, ಜೆ.ಎನ್.ನಂಜಪ್ಪ, ವಿ.ನಾರಾಯಣ ಭಾಗವಹಿಸಿದ್ದರು.