ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ದೂರು
ಶಿಡ್ಲಘಟ್ಟ: ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಪಿಲ್ಲರ್ಗಳನ್ನು ತೆರವು ಮಾಡಲು ಹೋಗಿದ್ದ ಪುರಸಭಾ ಮುಖ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎನ್ನಲಾಗಿದ್ದ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷರ ಮೇಲೆ ದೂರು ದಾಖಲಾಗಿದೆ. ಒಂದು ವಾರದ ಹಿಂದೆ ಕಟ್ಟಡ ತೆರವು ಮಾಡಲು ತೆರಳಿದ್ದ ವೇಳೆ ನಡೆದಿದ್ದ ಗಲಾಟೆಗೆ ಸಂಬಂಧಿಸಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎ. ರಾಮಚಂದ್ರಪ್ಪ ಅವರ ಮೇಲೆ ಪುರಠಾಣೆಯಲ್ಲಿ ಮುಖ್ಯಾಧಿಕಾರಿ ರಾಮ್ ಪ್ರಕಾಶ್ ದೂರು ನೀಡಿದ್ದಾರೆ ಎಂದು ಪುರಠಾಣೆ ಪಿಎಸ್ಐ ಪುರುಷೋತ್ತಮ್ ತಿಳಿಸಿದ್ದಾರೆ.